Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ದಸರಾ ಆನೆಗಳಿಗೆ ತಾಲೀಮು: ಧೈರ್ಯ ಪ್ರದರ್ಶಿಸಿದ ಗಜಪಡೆ

ಮೈಸೂರು: ನಾಡಹಬ್ಬ ದಸರಾದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದಿರುವ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಗಜಪಡೆ ಎದುರು ಫಿರಂಗಿ ಮೂಲಕ ಕುಶಾಲ ತೋಪು ಸಿಡಿಸಿ ಬುಧವಾರ ತಾಲೀಮು ನಡೆಸಲಾಯಿತು.

ದಸರಾ ವಸ್ತುಪ್ರದರ್ಶನದ ವಾಹನ ನಿಲ್ದಾಣದಲ್ಲಿ ಇಂದು ನಡೆದ ಕುಶಾಲತೋಪು ತಾಲೀಮು ಯಶಸ್ವಿಯಾಗಿ ನೆರವೇರಿತು.

ಕ್ಯಾಪ್ಟನ್ ಅಭಿಮನ್ಯು ನೇತ್ರತ್ವದ ಮಹೇಂದ್ರ, ಪ್ರಶಾಂತ, ಭೀಮ, ಧನಂಜಯ ಕದಲದೆ ಧೈರ್ಯ ತೋರಿದರೆ, ಪಕ್ಕದಲ್ಲಿದ್ದ ಕುಮ್ಕಿ ಆನೆ ಇನ್ನಿತರ ಕಿರಿಯ ಆನೆಗಳು ಆವುಗಳನು ತಾಗಿನಿಂತು ಧೈರ್ಯ ತಂದುಕೊಂಡವು.

ಕಿರಿಯ ಆನೆ ರೋಹಿತ್‌ ಹಿಂದೆ ತಿರುಗಿ ನಿಂತಿದ್ದ, ಡೊಡ್ಡ ಹರವೆ ಲಕ್ಷ್ಮಿ ಸ್ವಲ್ಪ ಬೆಚ್ಚಿದಳು. ಇನ್ನೂ ಕಂಜನ್‌, ಪ್ರಶಾಂತ, ಸುಗ್ರೀವ, ಹಾಗೂ ಹಿರಣ್ಯ ಆನೆ ಭೀಮನು ಧೈರ್ಯ ತುಂಬಿದ.

ಅಭ್ಯಾಸದ ಹಿನ್ನೆಲೆ…
ಗಜಪಡೆಗೆ ಇಂದು 21 ಕುಶಾಲ ತೋಪು ಹಾರಿಸುವ ಮೂಲಕ ಈ ಅಭ್ಯಾಸ ನಡೆಸಲಾಯಿತು.

ಮೈಸೂರು ದಸರಾ ಆಕರ್ಷಣೆಯಾದ ಜಂಬುಸವಾರಿ ದಿನದಂದು ಅರಮನೆ ಆವರಣದಲ್ಲಿ ನಾಡ ಅದಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮುನ್ನ 21 ಕುಶಾಲತೋಪನ್ನು ಹಾರಿಸಲಾಗುತ್ತದೆ. ಆನೆಗಳು ಕುದುರೆಗಳು ಈ ವೇಳೆ ಹೆದರಬಾರದು ಎಂಬ ಹಿನ್ನೆಲೆಯಲ್ಲಿ ಇಂದು ಕುಶಾಲತೋಪು ಅಭ್ಯಾಸವನ್ನು ನಡೆಸಲಾಯಿತು. ಇಂದು ಮೊದಲ ಸುತ್ತಿನ ಕುಶಾಲತೋಪು ಅಭ್ಯಾಸವನ್ನು ನಡೆಸಲಾಗಿದೆ. ಇನ್ನು ಎರಡು ಬಾರಿ ಅಂದರೆ ಸೆ. 29 ಹಾಗೂ ಅ. 1ರಂದು ಕುಶಾಲ ತೋಪು ಅಭ್ಯಾಸವನ್ನು ನಡೆಸಲಾಗುವುದು.

Tags: