Mysore
18
overcast clouds

Social Media

ಗುರುವಾರ, 01 ಜನವರಿ 2026
Light
Dark

ಸೂರತ್‌ನಲ್ಲಿ ನಡೆಯುವ ನ್ಯಾಷನಲ್‌ ಲೆವೆಲ್‌ ಯೋಗ ಸ್ಪರ್ಧೆಗೆ ಆಯ್ಕೆಯಾದ ಮೈಸೂರಿನ ಬಾಲಕರು

ಮೈಸೂರು: ಸೂರತ್‌ನಲ್ಲಿ ನಡೆಯುವ ನ್ಯಾಷನಲ್‌ ಲೆವೆಲ್‌ ಯೋಗ ಸ್ಪರ್ಧೆಗೆ ನಂಜನಗೂಡಿನ ಇಬ್ಬರು ಬಾಲಕರು ಆಯ್ಕೆಯಾಗಿ ಕೀರ್ತಿ ತಂದಿದ್ದಾರೆ.

ನಂಜನಗೂಡಿನ ದೇವಿರಮ್ಮನಹಳ್ಳಿಯಲ್ಲಿರುವ ನಂಜುಂಡೇಶ್ವರ ಯೋಗ ವಿದ್ಯಾಲಯದಲ್ಲಿ ಯೋಗಾಭ್ಯಾಸ ಮಾಡುತ್ತಿರುವ ಆರನೇ ತರಗತಿಯ ಚಿರಾಗ್‌ ಹಾಗೂ ಏಳನೇ ತರಗತಿ ಓದುತ್ತಿರುವ ಜಯಚಂದ್ರ ಎಂಬ ಬಾಲಕರು ಬೆಂಗಳೂರಿನ ಎಸ್‌ಜೆಆರ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ನಡೆದ zonel ಲೆವೆಲ್‌ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ನ್ಯಾಷನಲ್‌ ಲೆವೆಲ್‌ಗೆ ಆಯ್ಕೆಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂದೆ ಸೂರತ್‌ನಲ್ಲಿ ನಡೆಯುವ ನ್ಯಾಷನಲ್‌ ಲೆವೆಲ್‌ ಯೋಗ ಸ್ಪರ್ಧೆಗೆ ಈ ಬಾಲಕರು ಆಯ್ಕೆಯಾಗಿದ್ದು, ಯೋಗಾ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

ಯೋಗ ಶಿಕ್ಷಕ ರಮೇಶ್‌ ಅವರ ಪರಿಶ್ರಮದಿಂದಲೇ ಬಾಲಕರು ಈ ಸಾಧನೆ ಮಾಡಿದ್ದು, ಬಾಲಕರಿಗೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

 

 

 

Tags:
error: Content is protected !!