Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಮುಡಾ ಪ್ರಕರಣ: ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ ತೀರ್ಪು ಇಂದು(ಸೆ.24) ಹೈಕೋರ್ಟ್‌ನಲ್ಲಿ ಹೊರಬೀಳಲಿದ್ದು ತೀರ್ಪು ನಮ್ಮ ಪರ ಬರದಿದ್ದರೆ ಸುಪ್ರೀಂಕೋರ್ಟ್‌ ಮೊರೆ ಹೋಗಲಾಗುವುದು ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ಮುಡಾ ಪ್ರಕರಣ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇಂದು ಮುಖ್ಯಮಂತ್ರಿ ಪ್ರಾಸಿಕ್ಯೂಷನ್‌ಗೆ ಸಂಬಂಧಿಸಿದಂತೆ ತೀರ್ಪು ಬರಲಿದೆ. ಈ ವಿಚಾರವಾಗಿ ಮಾತನಾಡಿದ ಸ್ನೇಹಮಯಿ ಕೃಷ್ಣ ಅವರು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರ ತೀರ್ಪು ಬಂದು, ನಮ್ಮ ಪರ ತೀರ್ಪು ಬರದೇ ಹೋದರೆ ನಾವೆಲ್ಲರೂ ಸುಪ್ರೀಂಕೋರ್ಟ್‌ ಮೊರೆ ಹೋಗುತ್ತೇವೆ.

ಮುಡಾ ಪ್ರಕರಣದಲ್ಲಿ ಅಂತಿಮ ಅಂತ್ಯ ಕಾಣಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಆರೋಪಿಗಳು ತಪ್ಪು ಮಾಡಿಲ್ಲ ಎಂದು ಹೇಳುವುದು ನೈಜತೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನ್ಯಾಯಾಲಯಕ್ಕೆ ಈಗಾಗಲೇ ಅನೇಕ ಸಾಕ್ಷಿ ನೀಡಿದ್ದೇವೆ. ಜೊತೆಗೆ ಸಿಎಂ ಅವರು ಸಹ ನಮ್ಮಂತೆಯೇ ಸಾಕ್ಷಿಗಳನ್ನು ನೀಡಿರುತ್ತಾರೆ. ಸಿದ್ದರಾಮಯ್ಯ ಅವರ ಮಡದಿ ಹೆಸರಿನಲ್ಲಿರುವ 50:50 ಅನುಪಾತದ ಬದಲಿ ನಿವೇಶನ ಅವರ ಅಧಿಕಾರ ಅವಧಿಯಲ್ಲೇ ಪಡೆದಿದ್ದಾರೆ. ಮುಡಾದ 50:50 ಅನುಪಾತದ ಬದಲಿ ನಿವೇಶನ ತಪ್ಪು ಎಂದು ಆದೇಶದಲ್ಲೇ ಸ್ಪಷ್ಟವಾಗಿದೆ. ಆಗಿದ್ದ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ನಿವೇಶನ ಪಡೆದಿರುವುದು ತಪ್ಪು ಎನ್ನುವುದು ಕೂಡ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

Tags: