Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಶತಮಾನ ತುಂಬಿದ ಹರವೆಯ ಕನ್ನಡ ಶಾಲೆ

ಇದು ಚಾಮರಾಜನಗರದ ಬಳಿಯ ಹರವೆಯ ಮಾಧ್ಯಮಿಕ ಶಾಲಾಕಟ್ಟಡದ ಶಿಲಾನ್ಯಾಸ ಫಲಕ. ಆಗಿನ ಮೈಸೂರು ರಾಜ್ಯದ ಪ್ರಥಮ ಪ್ರಧಾನ ಸಚಿವರಾದ(ಮುಖ್ಯಮಂತ್ರಿಗಳಿಗೆ ಅಂದು ಪ್ರಧಾನ ಸಚಿವರೆಂದು ಕರೆಯುತ್ತಿದ್ದರಂತೆ) ಕೆ. ಸಿ. ರೆಡ್ಡಿಯವರೆ ಗ್ರಾಮಕ್ಕೆ ಆಗಮಿಸಿದ್ದು ಇತಿಹಾಸ.

ಹರವೆ ಗ್ರಾಮದ ಸುತ್ತಲಿನ ಇಪ್ಪತ್ತು ಮೂವತ್ತು ಗ್ರಾಮಗಳ ಮಕ್ಕಳು ಓದಿಗಾಗಿ ಮುಖ ಮಾಡಿ ಇತ್ತ ಬರಲಾರಂಭಿಸಿದ್ದರು. ಈ ಶಾಲೆ ಈ ಮೊದಲು ಮಹಾರಾಜರ ಕಾಲದಲ್ಲಿ ಪ್ರಾಥಮಿಕ ಶಾಲೆಯಾಗಿ ಶುರುವಾಗಿತ್ತಂತೆ. ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದು ಸದ್ಯ ಹರವೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಕವಿ, ಲೇಖಕ ಮಹೇಶ್ ಹರವೆಯವರು ಶಾಲೆಯಲ್ಲಿನ ತಮ್ಮ ಓದಿನ ದಿನಗಳನ್ನು ಸಂಭ್ರಮದಿಂದ ಹಂಚಿಕೊಳ್ಳುತ್ತಾರೆ.

ಮಕ್ಕಳಿಗೆ ಹರಿಹರನ ರಗಳೆಗಳನ್ನು, ಶರಣರ ಕತೆಗಳನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಹೇಳಿಕೊಡುತ್ತಿದ್ದ ಸೋಮಣ್ಣ ಮೇಷ್ಟ್ರು, ಭೈರಪ್ಪರ ಪರ್ವ, ಗೃಹಭಂಗ ಕಾದಂಬರಿಗಳನ್ನ ಓದಿ ಮಕ್ಕಳಿಗೆ ಕತೆ ಹೇಳುತ್ತಿದ್ದ ಎಚ್. ನಾಗರಾಜು ಮೇಷ್ಟ್ರು, ಇಂಗ್ಲಿಷ್ ಕಲಿಸುತ್ತಿದ್ದ ಪುಟ್ಟಸ್ವಾಮಿ ಮೇಷ್ಟ್ರು ಹೀಗೆ ಸೃಜನಶೀಲ ಗುರು ಪರಂಪರೆಯನ್ನು ಪ್ರೀತಿಯಿಂದ ನೆನೆಯುವ ಮಹೇಶ್ ಹರವೆಯವರು ತಮ್ಮ ಸೃಜನಶೀಲ ನೆಲೆಯ ತಳಪಾಯ ಪ್ರೈಮರಿ ಶಾಲೆಯದ್ದು ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಮತ್ತು ಪ್ರಖರ ವೈಚಾರಿಕ ಪ್ರಜ್ಞೆಯ ಲೇಖಕರಾಗಿದ್ದ ದೇವಯ್ಯ ಹರವೆಯವರು ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದವರು ಎಂದು ನೆನಪಿಸಿಕೊಳ್ಳುತ್ತಾರೆ. ಇತ್ತೀಚಿಗೆ ಹಲವು ಕಾರಣದಿಂದಾಗಿ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿರುವಾಗ ಒಂದೇ ಶೈಕ್ಷಣಿಕ ವರ್ಷದಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳು ದಾಖಲಾಗಿರುವ ಇತಿಹಾಸ ಶಾಲೆಯದು.

ಮಾಹಿತಿ: ಅನಿಲ್ ಕುಮಾರ್ ಹೊಸೂರು, ಶಿಕ್ಷಕರು, ಚಾಮರಾಜನಗರ

 

Tags: