Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಓದುಗರ ಪತ್ರ ದೀಪಾಲಂಕಾರ: ಕಟ್ಟಡಗಳ ರಂಧ್ರ ಮುಚ್ಚುವುದು ಅಗತ್ಯ

ನಾಡಹಬ್ಬ ದಸರಾ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಮೈಸೂರಿನ ಪಾರಂಪರಿಕ ಕಟ್ಟಡಗಳು ಹಾಗೂ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ.
ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡುವ ವೇಳೆ ಕಟ್ಟಡದ ಗೋಡೆಗಳಿಗೆ ಕಬ್ಬಿಣದ ದೊಡ್ಡ ದೊಡ್ಡ ಸಲಾಕೆಗಳು ಹಾಗೂ ಮೊಳೆಗಳನ್ನು ಹೊಡೆಯಲಾಗುತ್ತದೆ. ಆದರೆ ದಸರಾ ಮುಗಿದ ನಂತರ ಈ ಮೊಳೆಗಳನ್ನು ಹೊಡೆದ ಜಾಗಗಳು ರಂಧ್ರಗಳಾಗಿದ್ದರೂ ಅವುಗಳನ್ನು ಮುಚ್ಚುವ ಕಡೆ ಗಮನಹರಿಸುವುದಿಲ್ಲ. ಇದರಿಂದಾಗಿ ಕಟ್ಟಡದ ವಿವಿಧ ಭಾಗಗಳಲ್ಲಿಯೂ ತೂತು ಬಿದ್ದು, ಕಟ್ಟಡ ಸಡಿಲಗೊಳ್ಳಲಿದೆ. ನಗರದ ಅನೇಕ ಪಾರಂಪರಿಕ ಕಟ್ಟಡಗಳು ಸಡಿಲಗೊಳ್ಳಲು ಇದೂ ಒಂದು ಪ್ರಮುಖ ಕಾರಣವಾಗಿದೆ. ಆದ್ದರಿಂದ ದೀಪಾಲಂಕಾರ ಮಾಡುವ ಗುತ್ತಿಗೆ ಪಡೆದವರು ದಸರಾ ಮುಗಿದ ಬಳಿಕ ಮೊಳೆ ಹಾಗೂ ಸಲಾಕೆಗಳನ್ನು ಹೊಡೆದ ಜಾಗವನ್ನು ಸಿಮೆಂಟ್‌ನಿಂದ ಮುಚ್ಚಬೇಕಿದೆ.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು,

Tags: