ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧದ ಡಿನೋಟಿಫಿಕೇಶನ್ ಹಗರಣದ ಕುರಿತು ಕಾಂಗ್ರೆಸ್ ಸಚಿವರು ರಾಜೀನಾಮೆ ಆಗ್ರಹಿಸಿದ್ದರು. ಇದೀಗ ಈ ವಿಚಾರ ಕುರಿತು ಎಚ್‌ಡಿಕೆ ತಿರುಗೇಟು ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಕಸಲಗೆರೆ ಗ್ರಾಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಡಿನೋಟಿಫಿಕೇಶನ್ ಕೇಸ್‌ಗೂ ನನಗೂ ಏನು ಸಂಬಂಧ? ಇಂಗ್ಲೀಷ್ ಓದೋಕೆ ಬರುತ್ತೋ ಅಥವಾ ಕನ್ನಡ ಓದೋಕೆ ಬರುತ್ತೋ ಎಂದು ಕಾಂಗ್ರೆಸ್ ಸಚಿವರಿಗೆ ಮೊದಲು ಕೇಳಿ. ಅನಂತರ ಅವರೆಲ್ಲರೂ ಕುಳಿತುಕೊಂಡು ಆ ಪೇಪರ್‌ನಲ್ಲಿ ಏನಿದೆ ಎಂಬುದನ್ನು ಸರಿಯಾಗಿ ಓದಲಿ ಎಂದರು.
ಮುಡಾ ಹಗರಣಕ್ಕೂ ನಮಗೂ ಸಂಬಂಧ ಇಲ್ಲ. ನಾನು ಏನು ತಪ್ಪು ಮಾಡಿಲ್ಲ. ಬೇಕಿದ್ದರೆ ತನಿಖೆ ನಡೆಸಲಿ, ಅವರು ಸರಿಯಾಗಿ ದಾಖಲೆಗಳನ್ನು ನೋಡಿಲ್ಲವೆಂದು ಕಾಣುತ್ತದೆ. ಯಾರೋ ಏನೋ ಬರೆದು ಕೊಟ್ಟಿದ್ದಾರೆ ಅದನ್ನು ತಂದು ಇಲ್ಲಿ ತುತ್ತೂರಿ ಊದುತ್ತಿದ್ದಾರೆ. ಹೀಗಿರುವಾಗ ನನ್ನ ರಾಜೀನಾಮೆ ಕೇಳಲು ಕಾಂಗ್ರೆಸ್ ನಾಯಕರೇನೂ ಹುಚ್ಚರಾ? ಅವರು ಕೇಳಿದಾಕ್ಷಣ ನಾನೇಕೆ ರಾಜೀನಾಮೆ ನೀಡಬೇಕು? ಎಂದು ವಾಗ್ದಾಳಿ ನಡೆಸಿದರು.