Mysore
18
broken clouds

Social Media

ಬುಧವಾರ, 14 ಜನವರಿ 2026
Light
Dark

ಓದುಗರ ಪತ್ರ: ಅತಿಥಿ ಶಿಕ್ಷಕರಿಗೆ ಗೌರವ ಧನ ಮಂಜೂರು ಮಾಡಿ

ಓದುಗರ ಪತ್ರ

2024-25ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳಿಗೆ ಅತಿಥಿ ಶಿಕ್ಷಕರಾಗಿ ನೇಮಕಗೊಂಡಿರುವವರಿಗೆ ಕಳೆದ ಮೂರು ತಿಂಗಳ ಗೌರವ ಧನ ಮಂಜೂರಾಗದೆ ಇರುವುದರಿಂದ ಅವರ ಜೀವನ ನಿರ್ವಹಣೆ ಕಷ್ಟಕರವಾಗಿದೆ.

ಕಳೆದ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಗೌರವ ಧನ ಈವರೆಗೂ ಅತಿಥಿ ಶಿಕ್ಷಕರ ಕೈ ಸೇರಿಲ್ಲ. ಇನ್ನೇನು ಸೆಪ್ಟೆಂಬರ್ ತಿಂಗಳೂ ಮುಗಿಯುವ
ಹಂತಕ್ಕೆ ಬಂದಿದ್ದು, ನಾಲ್ಕು ತಿಂಗಳುಗಳು ಕಳೆದರೂ ವೇತನವಿಲ್ಲ ಎಂದರೆ ಶಿಕ್ಷಕರು ಹೇಗೆ ತಾನೆ ಕೆಲಸ ಮಾಡಬೇಕು?

ಸರ್ಕಾರ ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ 10,000 ರೂ. ಹಾಗೂ ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರಿಗೆ 10,500 ರೂ. ಗೌರವ ಧನವನ್ನು ನಿಗದಿ ಮಾಡಿದೆ. ಈ ವೇತನವನ್ನು ಸರಿಯಾದ ಸಮಯಕ್ಕೆ ನೀಡಬೇಕಾದದ್ದು ಸರ್ಕಾರದ ಕರ್ತವ್ಯ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಅತಿಥಿ ಶಿಕ್ಷಕರಿಗೆ ಗೌರವ ಧನವನ್ನು ಮಂಜೂರು ಮಾಡಬೇಕಿದೆ.

ನೊಂದ ಅತಿಥಿ ಶಿಕ್ಷಕ.

 

Tags:
error: Content is protected !!