Mysore
23
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಓದುಗರ ಪತ್ರ: ಭಿಕ್ಷೆ ಬೇಡುವ ಮಕ್ಕಳನ್ನು ರಕ್ಷಿಸಿ

ಆರ್ಥಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅನೇಕ ನಗರಗಳ ಸಿಗ್ನಲ್‌ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಕೆಲ ಕುಟುಂಬಗಳವರು ಚಿಕ್ಕ ಚಿಕ್ಕ ಮಕ್ಕಳನ್ನು ಬಿಟ್ಟು ಭಿಕ್ಷೆ ಬೇಡಿಸುತ್ತಿದ್ದಾರೆ.

ಇದನ್ನೇ ವೃತ್ತಿಯಾಗಿಸಿಕೊಂಡಿರುವ ಅನೇಕರು ತಮ್ಮ ಮಕ್ಕಳ ಮೂಲಕ ಭಿಕ್ಷೆ ಬೇಡಿಸಿ ಬದುಕುತ್ತಿರುವುದು ವಿಷಾದಕರ.

ತಾವು ದುಡಿದು ಮಕ್ಕಳನ್ನು ಬೆಳೆಸಬೇಕಾದ ತಂದೆ-ತಾಯಿಯೇ ದೂರ ದಲ್ಲಿ ನಿಂತು ಮಕ್ಕಳನ್ನು ಭಿಕ್ಷೆ ಬೇಡಲು ಬಿಟ್ಟು ಅಲ್ಲಿಂದ ಬಂದ ಹಣದಲ್ಲಿ ಜೀವನ ಸಾಗಿಸುತ್ತಿರುವುದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮಾರಕವಾಗಿರುವ ಜತೆಗೆ ಆ ಮಕ್ಕಳ ಭವಿಷ್ಯವನ್ನೂ ಹಾಳು ಮಾಡಿದಂತಾಗಿದೆ.

ಕೇಂದ್ರ ಸರ್ಕಾರ ಬಡತನ ನಿರ್ಮೂಲನೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ರಾಜ್ಯ ಸರ್ಕಾರವೂ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ಕಲ್ಪಿಸಿದೆ. ವಸತಿ ಯೋಜನೆಗಳ ಮೂಲಕ ನಿರ್ಗತಿಕರಿಗೆ ಮನೆಗಳನ್ನೂ ನೀಡಲಾಗುತ್ತಿದೆ. ಇಷ್ಟಿದ್ದರೂ ತಾವು ದುಡಿದು ಮಕ್ಕಳನ್ನು ಸಾಕಬೇಕಿದ್ದ ತಂದೆ-ತಾಯಿಯರೇ ಚಿಕ್ಕ ವಯಸ್ಸಿನ ಮಕ್ಕಳನ್ನು ಬಿಟ್ಟು ಭಿಕ್ಷೆ ಬೇಡಿಸುವುದು ಸರಿಯೇ? ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಇಂತಹ ಮಕ್ಕಳನ್ನು ರಕಿಸಿ ಶಿಕ್ಷಣ, ವಸತಿ ಕಲ್ಪಿಸುವ ಜತೆಗೆ ಅವರ ಕುಟುಂಬಗಳನ್ನು ಸಂಪರ್ಕಿಸಿ ಅವರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸುವ ಜತೆಗೆ ಎಲ್ಲರಂತೆ ಅವರೂ ದುಡಿಮೆ ಮಾಡಲು ಅವಕಾಶ ಮಾಡಿಕೊಡಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.

Tags: