Mysore
23
broken clouds
Light
Dark

ಈರುಳ್ಳಿಗೆ ಏರುವ ಭಾಗ್ಯ

ಕಳೆದ ಒಂದು ವಾರದಿಂದ ಈರುಳ್ಳಿ ದರ ಸತತವಾಗಿ ಏರಿಕೆಯಾಗುತ್ತಿದೆ. ಕಳೆದ ಶನಿವಾರ ಕೆ.ಜಿ.ಗೆ 40 ರೂ. ಇದ್ದ ಈರುಳ್ಳಿಗೆ ಈಗ 60 ರೂ.ಗಳಿಗೆ ಏರಿಕೆಯಾಗಿದೆ. ಕ್ವಿಂಟಾಲ್‌ಗೆ ಗರಿಷ್ಟ 3,000 ರೂ.ಗಳಿಂದ 4,000 ರೂ. ಇದ್ದ ಬೆಲೆಯು 5,200 ರೂ.ಗಳಿಗೆ ತಲುಪಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ ಹರಾಜು ಪ್ರಕ್ರಿಯೆ ನಡೆಯುತ್ತದೆ. ಕಳೆದ ಬುಧವಾರ (ಸೆ.11) ಕ್ವಿಂಟಾಲ್ ಗೆ ಕನಿಷ್ಠ 3,000 ರೂ. ಗರಿಷ್ಟ 5,000 ರೂ. ಇತ್ತು. ಆದರೆ ಮೂರು ದಿನಗಳ ಅಂತರದಲ್ಲಿ ಮತ್ತೆ 200 ರೂ. ಏರಿಕೆಯಾಗಿದೆ. ಶ್ರಾವಣ ಮಾಸ ಮುಗಿದ ಬಳಿಕ ಮಾಂಸಾಹಾರ ಹೋಟೆಲ್, ರೆಸ್ಟೋರೆಂಟ್, ಬಾರ್‌ಗಳಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿರು ವುದರಿಂದ ಈರುಳ್ಳಿ ದರದಲ್ಲಿ ನಿರಂತರವಾಗಿ ಏರಿಕೆ ಕಂಡು ಬಂದಿದೆ. ಅಲ್ಲದೆ ಈ ಬಾರಿ ಉತ್ತರ ಭಾರತದಲ್ಲಿ ಅತಿವೃಷ್ಟಿಯಿಂದಾಗಿ ಈರುಳ್ಳಿ ಫಸಲು ಹಾಳಾಗಿದ್ದು, ಗುಜರಾತ್, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶಕ್ಕೆ ಹೆಚ್ಚು ರವಾನೆಯಾಗುತ್ತಿದೆ. ಅಲ್ಲದೆ ಮುಂಬೈ, ಪುಣೆ, ಸೂರತ್, ದೆಹಲಿ ಮುಂತಾದ ನಗರಗಳಲ್ಲೂ ಬೇಡಿಕೆ ಹೆಚ್ಚಾಗಿರುವುದರ ಜತೆಗೆ ಈ ಬಾರಿಯ ಮುಂಗಾರು ಫಸಲು ಇನ್ನೂ ಮಾರುಕಟ್ಟೆಗೆ ಬಂದಿಲ್ಲದ ಪರಿಣಾಮ ದರ ಏರಿಕೆಯಾಗಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.