Mysore
19
overcast clouds
Light
Dark

ನಾವು ತಲ್ವಾರ್‌ ಹಿಡಿಯಬೇಕಾಗುತ್ತೆ: ಪ್ರತಾಪ್‌ ಸಿಂಹ ಮತ್ತೊಂದು ವಿವಾದಾತ್ಮಕ ಹೇಳಿಕೆ

ಮೈಸೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದ ಹಿನ್ನಲೆ ನಿರುದ್ಯೋಗಿಯಾಗಿರುವ ಮಾಜಿ ಸಂಸದ ಪ್ರತಾಪ್‌ ಸಿಂಹ, ಸದಾ ಒಂದಿಲ್ಲೊಂದು ವಿವಾದ್ಮಾತಕ ಹೇಳಿಕೆ ನೀಡುತ್ತಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಳದಲ್ಲಿ ಮಾತನಾಡಿದ್ದ ಪ್ರತಾಪ್‌ ಸಿಂಹ ಕೊಲೆ ಆರೋಪಿಗಳ ಎನ್‌ಕೌಂಟರ್‌ ಮಾಡುವ ಬಗ್ಗೆ ಮಾತನಾಡಿ ವಿವಾದ ಮಾಡಿದ್ದರು. ಇದೀಗ ʼನಾವು ತಲ್ವಾರ್‌ ಹಿಡಿಯುತ್ತೇವೆʻ ಎಂದು ಹೇಳುವ ಮೂಲಕ ಮತ್ತೆ ವಿವಾದ ಸೃಷ್ಟಿಸಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್‌ ಸಿಂಹ, ಮುಸ್ಲಿಮರ ಕೈಯಲ್ಲಿರುವ ಪಟ್ರೋಲ್‌ ಬಾಂಬ್‌, ತಲ್ವಾರ್‌ಗಳನು ಸರ್ಕಾರ ಕಿತ್ತುಕೊಳ್ಳಬೇಕು. ಇಲ್ಲದಿದ್ದರೆ, ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ನಾವು ಅವುಗಳನ್ನು ಹಿಡಿದುಕೊಳ್ಳಬೇಕಾಗುತ್ತದೆ. ಆಗ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಮ್ಮ ರಕ್ಷಣೆ ನಮಗೆ ಗೊತ್ತಿದೆ…

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಣೇಶ ಮೂರ್ತಿಗಳ ಅದ್ದೂರಿ ಮೆರವಣಿಗೆಗೆ ಸಿದ್ಧತೆಗಳು ನಡೆದಿದ್ದು, ಸರ್ಕಾರ ಮುಸ್ಮಿಂ ಪುಂಡರ ಮೇಲೆ ನಿಯಂತ್ರಣ ಹೇರಬೇಕು. ಇಲ್ಲದಿದ್ದರೆ ನಮ್ಮ ರಕ್ಷಣೆ, ಜವಾಬ್ದಾರಿ ನಮಗೆ ಗೊತ್ತಿದೆ ಎಂದು ಹೇಳಿದರು.

ಅಮಾಯಕರ ಮೇಲೆ ಕ್ರಮವಾದರೆ ಅರ್ಥವೇನು?

ನಾಗಮಂಗಲದಲ್ಲಿ ಅಮಾಯಕ ಹಿಂದೂಗಳನ್ನು ಬಂಧಿಸಿದರೆ ಮತ್ತೆ ಅಲ್ಲಿಗೆ ಹೋಗುತ್ತೇವೆ. ಪೊಲೀಸ್‌ ಠಾಣೆಗೂ ಬರುತ್ತೇವೆ. ಗಲಭೆ ಎಬ್ಬಿಸಿದವ ಮೇಲೆ ಕ್ರಮವಾಗಬೇಕು. ಅದು ಬಿಟ್ಟು ಗಲಭೆ ಕುರಿತು ಪ್ರತಿಕ್ರಿಯಿಸಿದವರ ಮೇಲೆ ಕ್ರಮವಾದರೆ ಅರ್ಥವೇನೆ ಎಂದು ಕೇಳಿದರು.