Mysore
15
clear sky

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಓದುಗರ ಪತ್ರ: ಹಾರ್ಡಿಕ್ ಶಾಲೆಗೂ ದೀಪಾಲಂಕಾರ ಮಾಡಿ

ಮೈಸೂರಿನ ಝಾನ್ಸಿ ಲಕ್ಷ್ಮೀ ಬಾಯಿ ರಸ್ತೆಯಲ್ಲಿರುವ ಹಾರ್ಡಿಕ್ ಶಾಲೆಯೂ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿದ್ದು, ಈ ಬಾರಿಯ ದಸರಾ ಮಹೋತ್ಸವದಲ್ಲಿ ಈ ಶಾಲೆಯ ಕಟ್ಟಡಕ್ಕೂ ದೀಪಾಲಂಕರ ಮಾಡಬೇಕಿದೆ.

ಒಂದೂವರೆ ಶತಮಾನಕ್ಕೂ ಅಧಿಕ (ಸುಮಾರು 170 ವರ್ಷ) ವರ್ಷಗಳ ಇತಿಹಾಸವನ್ನು ಹೊಂದಿರುವ ಹಾರ್ಡಿಕ್ ಶಾಲೆಯು ಒಂದು ಸುಂದರ ಪಾರಂಪರಿಕವಾದ ಮೂರು ಅಂತಸ್ತುಗಳ ಕಟ್ಟಡವನ್ನು ಹೊಂದಿದೆ.

ಅಲ್ಲದೆ ಕಮಾನಿನ ಸ್ವಾಗತ ದ್ವಾರವನ್ನೂ ಈ ಕಟ್ಟಡದಲ್ಲಿ ಕಾಣಬಹುದು. ಸರ್ಕಾರ ಪ್ರತಿ ದಸರಾ ಮಹೋತ್ಸವದಲ್ಲಿಯೂ ನಗರದ ಪ್ರಮುಖ ವೃತ್ತಗಳು, ರಸ್ತೆಗಳು, ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡುತ್ತದೆ. ಇದು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು, ದಸರಾಗೆ ಮತ್ತಷ್ಟು ಮೆರುಗು ನೀಡಲಿದೆ. ಆದ್ದರಿಂದ ಈ ಬಾರಿಯ ದಸರಾದಲ್ಲಿ ನಗರಕ್ಕೆ ದೀಪಾಲಂಕಾರ ಮಾಡುವಾಗ ಹಾರ್ಡಿಕ್ ಶಾಲೆಯ ಕಟ್ಟಡಕ್ಕೂ ದೀಪಾಲಂಕಾರ ಮಾಡಿ ಕಟ್ಟಡದ ಸೌಂದರ್ಯ ಹೆಚ್ಚಿಸಬೇಕಿದೆ.

-ಅಹಲ್ಯ ಸಿ.ನಾ.ಚಂದ್ರೇಗೌಡ, ಜನತಾ ನಗರ, ಮೈಸೂರು.

 

Tags:
error: Content is protected !!