Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸೆ.1ರಿಂದ ಜಾನುವಾರು ಗಣತಿ

ಸಿದ್ದರಾಮನಹುಂಡಿಯಲ್ಲಿ ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯ

ಮೈಸೂರು: ದೇಶದಾದ್ಯಂತ ಹಸು, ನಾಯಿ, ಕುರಿ, ಆಡು ಸೇರಿದಂತೆ 21ನೇ ಜಾನುವಾರು ಗಣತಿ ಸೆ.1ರಂದು ಆರಂಭಗೊಳ್ಳಲಿದೆ.

ನಾಲ್ಕು ತಿಂಗಳು ನಡೆಯಲಿರುವ ಜಾನು ವಾರು ಗಣತಿಗಾಗಿ ಮೈಸೂರು ಜಿಲ್ಲೆಯಲ್ಲಿ ಪಶು ಸಂಗೋಪನಾ ಇಲಾಖೆ 180 ಮಂದಿ ಸಿಬ್ಬಂದಿಯನ್ನು ನಿಯೋಜಿಸಿದೆ.

ಮುಖ್ಯಮ೦ತ್ರಿ ಸಿದ್ದರಾಮಯ್ಯ ಅವರು ಈ ಬೃಹತ್ ಗಣತಿ ಕಾರ್ಯ ಕ್ರಮಕ್ಕೆ ಸೆ.1 ರಂದು ತಮ್ಮ ಸ್ವ ಗ್ರಾಮ ಮೈಸೂರು ತಾಲ್ಲೂಕಿನ ಸಿದ್ದರಾಮನ ಹುಂಡಿಯಲ್ಲಿ ಚಾಲನೆ ನೀಡುವರು. ಇದಕ್ಕಾಗಿ ಜಿಲ್ಲಾಡಳಿತ ಸಿದ್ಧತೆಗಳನ್ನು ಕೈಗೊಂಡಿದೆ.

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ .ಸಿ.ಮಹದೇವಪ ಹಾಗೂ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಪಶುಸಂಗೋಪನೆ ಇಲಾಖೆಯ 159 ಮಂದಿ ಸಿಬ್ಬಂದಿ ಹಾಗೂ 30 ಮಂದಿ ಮೇಲ್ವಿ ಚಾರಕರ ನೇತೃತ್ವದಲ್ಲಿ ಗಣತಿ ಕಾರ್ಯ ನಡೆಯಲಿದೆ.

ಗಣತಿ ವೇಳೆ ಜಿಲ್ಲಾದ್ಯಂತ ಇರುವ ಹಸು, ಎಮ್ಮೆ, ಕುರಿ, ಆಡು, ನಾಯಿ, ಮೊಲ, ಕೋಳಿ, ಹಂದಿ, ಬಿಡಾಡಿ ನಾಯಿಗಳು, ಬಿಡಾಡಿ ರಾಸುಗಳು, ದೇವಾಲಯಗಳಸುಪರ್ದಿಯಲ್ಲಿ ಇರುವ ಆನೆಗಳ ಎಣಿಕೆ ನಡೆಯಲಿದೆ.

ಸ್ಟಾರ್ಟ್‌ ಫೋನ್ ಬಳಸಿ ಗಣತಿ: ವಿಶೇಷ ವೆಂದರೆ ಇದೇ ಪ್ರಥಮ ಬಾರಿಗೆ ಸ್ಟಾರ್ಟ್ ಫೋನ್ ಬಳಸಿ ಗಣತಿ ನಡೆಸಲಾಗುತ್ತಿರು ವುದು. ಇದಕ್ಕಾಗಿ ಕೇಂದ್ರ ಪಶುಸಂಗೋಪನಾ ಸಚಿವಾಲಯ ’21 ಫಸ್ಟ್ ಲೈವ್ ಸ್ಟಾಕ್ ಸೆನ್ಸಸ್ ಎನ್ನುವ ಪ್ರತ್ಯೇಕ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್ ಬಳಸುವ ಕುರಿತು ಸಿಬ್ಬಂದಿಗೆ ಈಗಾಗಲೇ ತರಬೇತಿ ಯನ್ನೂ ನೀಡಲಾಗಿದೆ.

ಸಿಬ್ಬಂದಿಗೆ ಗುರುತಿನ ಚೀಟಿ: ಗಣತಿದಾರರು ಜಿಲ್ಲೆಯ ಎಲ್ಲಾ ಗ್ರಾಮಗಳು ಹಾಗೂ ನಗರ ಪ್ರದೇಶದಲ್ಲಿ ಮನೆ ಮನೆಗಳಿಗೆ ತೆರಳಿ ಗಣತಿ ಕಾರ್ಯ ನಡೆಸುವರು. ಹೀಗಾಗಿ ಸಿಬ್ಬಂದಿಗೆ ಇಲಾಖೆ ವತಿಯಿಂದ ಫೋಟೊ, ಮೊಬೈಲ್ ಸಂಖ್ಯೆ ಹೊಂದಿರುವ ಗುರುತಿನ ಚೀಟಿ ನೀಡಲಾಗಿದೆ.

ಏನೇನು ಮಾಹಿತಿ?: ಜಾನುವಾರು ಗಣತಿ ಸಂದರ್ಭದಲ್ಲಿ, ರೈತರ ಮನೆಯಲ್ಲಿ ಇರುವ ಜಾನುವಾರುಗಳ ತಳಿ, ವಯಸ್ಸು, ಎಷ್ಟು ರೈತ ಮಹಿಳೆಯರು ಹೈನುಗಾರಿಕೆ, ಕೋಳಿ ಸಾಕಾಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಈ ಮೂಲಕ ಸರ್ಕಾರಗಳು ಜಾನುವಾರುಗಳ ರೋಗ ನಿಯಂತ್ರಿಸಲು, ಗುಣಮಟ್ಟ ಸುಧಾರಿ ಸಲು, ವಿಸ್ತರಣೆ, ಆಹಾರ ಪೂರೈಕೆಗೆ ಸಂಬಂಧಿಸಿದಂತೆ ಮುಂದಿನ ಯೋಜನೆ ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರೈತರಿಗೆ ಹಾಗೂ ಹೈನುಗಾರಿಕೆ ಕ್ಷೇತ್ರಕ್ಕೆ ಅಗತ್ಯವಾದ ನೀತಿ ಕಾರ್ಯಕ್ರಮ ರೂಪಿಸುವುದಕ್ಕೆ ಗಣತಿಯ ಅಂಕಿ-ಅಂಶಗಳನ್ನು ಬಳಸಲಾಗುವುದು.

ಜಿಲ್ಲೆಯ ವ್ಯಾಪ್ತಿಯಲ್ಲಿ ಗೋ ಶಾಲೆಗಳಿದ್ದರೆ ಇದರ ಬಗ್ಗೆ ಕೂಡ ವಾಹಿತಿ ಪಡೆಯಲಾಗುತ್ತದೆ. 10ಕ್ಕಿಂತ ಹೆಚ್ಚು ದನಗಳಿದ್ದರೆ, 1,000ಕ್ಕಿಂತ ಹೆಚ್ಚು ಕೋಳಿ ಸಾಕಿದ್ದರೆ, 50ರ ಮೇಲ್ಪಟ್ಟು ಆಡುಗಳನ್ನು ಸಾಕಾಣಿಕ ಮಾಡುತ್ತಿದ್ದರೆ ಅವುಗಳನ್ನುಫಾರಂಎಂದುಪರಿಗಣಿಸಲಾಗುತ್ತದೆ. ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ, ಮೀನುಗಾರಿಕೆ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ಜಾನುವಾರು ಗಣತಿಯನ್ನು ನಡೆಸುತ್ತದೆ.

ಜಾನುವಾರು ಗಣತಿ ಮೂಲಕ ಎಲ್ಲ ಸಾಕು ಪ್ರಾಣಿಗಳು ಮತ್ತು ದನ, ಎಮ್ಮೆ, ಕುರಿ, ಮೇಕೆ, ಹಂದಿ, ಕುದುರೆ, ಹೇಸರಗತ್ತೆ, ಕತ್ತೆ, ಒಂಟೆ, ನಾಯಿ, ಮೊಲ, ಆನೆ ಮತ್ತು ಕೋಳಿ ಪ್ರಭೇದ( ಬಾತುಕೋಳಿ) ಗಳಂತಹ ಒಟ್ಟು 16 ಜಾತಿಯ ಪ್ರಾಣಿಗಳ ಅಂಕಿ ಸಂಖ್ಯೆಯನ್ನು ಸಂಗ್ರಹಿಸಲಾಗುವುದು.

5 ವರ್ಷಗಳಿಗೊಮ್ಮೆ ಜಾನುವಾರು ಗಣತಿ: ಜಾನುವಾರು ಗಣತಿ ಐದು ವರ್ಷಗಳಿಗೆ ಒಮ್ಮೆ ನಡೆಯುತ್ತದೆ. ಇದು 1919 ರಲ್ಲಿ ಆರಂಭವಾಯಿತು. ಕೊನೆಯದಾಗಿ 2019ರಲ್ಲಿ ಗಣತಿ ನಡೆಸಲಾಗಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಜಾನುವಾರುಗಳ ಗಣತಿ ಮೂಲಕ ಅವುಗಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರಗಳು ಯೋಜನೆಗಳನ್ನು ರೂಪಿಸುತ್ತವೆ. . ಗುರುತಿನ ಚೀಟಿ ಹೊಂದಿರುವ ಗಣತಿದಾರರು ಪ್ರತಿ ಮನೆಗೂ ಬರಲಿದ್ದಾರೆ. ಈ ವೇಳೆ ಸಾರ್ವಜನಿಕರು ಅವರೊಂದಿಗೆ ಸಹಕರಿಸಿ ಮಾಹಿತಿ ನಿಡಬೇಕು.
-ಡಾ.ನಾಗರಾಜು, ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಮೈಸೂರು.

ಪ್ರಥಮ ಬಾರಿಗೆ ಸ್ಮಾರ್ಟ್ ಫೋನ್ ಬಳಸಿ ಎಣಿಕೆ
• ಜಿಲ್ಲೆಯಲ್ಲಿ ಪಶು ಸಂಗೋಪನಾ ಇಲಾಖೆಯ 180 ಸಿಬ್ಬಂದಿ ಬಳಕೆ ದೇಗುಲಗಳ ಸುಪರ್ದಿಯಲ್ಲಿರುವ ಆನೆಗಳ ಗಣತಿಯೂ ನಡೆಯಲಿದೆ
• ಮನೆ ಮನೆಗೆ ಬರಲಿದ್ದಾರೆ ಗಣತಿದಾರರು

Tags: