Mysore
29
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮೋದಿ ಅನಾವರಣಗೊಳಿಸಿದ್ದ ಛತ್ರಪತಿ ಮಹಾರಾಜರ ಪ್ರತಿಮೆ ಕುಸಿತ

ಮಹಾರಾಷ್ಟ್ರ: ಕಳೆದ ಡಿಸೆಂಬರ್‌ನಲ್ಲಿ ಮಹಾರಾಷ್ಟ್ರದ ಸಿಂಧುದುರ್ಗದ ಕೋಟೆ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅನಾವರಣಗೊಳಿಸಿದ್ದ ಛತ್ರಪತಿ ಶಿವಾಜಿ ಪ್ರತಿಮೆಯು ಮುರಿದು ಬಿದ್ದಿದೆ.

ಮಲ್ವಾನ್‌ ರಾಜ್‌ ಕೋಟ್‌ನಲ್ಲಿರುವ 35 ಅಡಿ ಉದ್ದದ ಪ್ರತಿಮೆಯೂ ಸೋಮವಾರ ಮದ್ಯಾಹ್ನ ಒಂದು ಗಂಟೆ ವೇಳೆಗೆ ಮುರಿದು ಬಿದ್ದಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮುರಿದುಬಿದ್ದಿರುವ ಬಗ್ಗೆ ಮಹಾರಾಷ್ಟ್ರ ಕಾಂಗ್ರೆಸ್‌ ತೀವ್ರ ಅಕ್ರೋಶ ಹೊರಹಾಕಿದೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, “ಬಿಜೆಪಿಯ ಭ್ರಷ್ಟ ಆಡಳಿತವು ಛತ್ರಪತಿ ಶಿವಾಜಿ ಮಹಾರಾಜರಿಗೆ ಮತ್ತು ಮಹಾರಾಷ್ಟ್ರಕ್ಕೆ ಅವಮಾನ ಮಾಡಿದೆ.

2023 ರ ಡಿಸೆಂಬರ್ 4 ರಂದು ನೌಕಾಪಡೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಇಂದು ಮಧ್ಯಾಹ್ನ ಕುಸಿದಿದೆ. ಕಳಪೆ ನಿರ್ಮಾಣದಿಂದ ಪ್ರತಿಮೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ” ಎಂದು ಕಿಡಿಕಾರಿದ್ದಾರೆ.

Tags:
error: Content is protected !!