Mysore
17
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಅಶೋಕ ರಸ್ತೆಯ ತುಂಬಾ ಗುಂಡಿಗಳು

 

ಮೈಸೂರು: ಅತಿ ಹೆಚ್ಚು ವಾಹನಗಳು ಓಡಾಡುವ ನಗರದ ರಸ್ತೆಗಳಲ್ಲಿ ಒಂದಾದ ಅಶೋಕ ರಸ್ತೆಯಲ್ಲಿ ಗುಂಡಿಗಳು ವಾಹನ ಹಾಳಾಗಿರುವ ರಸ್ತೆಯಲ್ಲಿ ಬಿದ್ದು ತೊಂದರೆಯಾಗುತ್ತಿದ್ದರೂ ರಸ್ತೆ ದುರಸ್ತಿಗೆ ಕೆಪ್ಪ ಕೈಕಾಲು ಮುರಿದುಕೊಂಡಿರುವ
ಕೈಗೊಳ್ಳದ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಷ್ಕರ್ ಪೊಲೀಸ್ ಠಾಣೆಯಿಂದ ಸಂತ ಫಿಲೋಮಿನಾ ಚರ್ಚ್ ಕಡೆಗೆ ಹೋಗುವ ಅಶೋಕ ರಸ್ತೆ ಸುಮಾರು 7 ತಿಂಗಳಿಂದಲೂ ಗುಂಡಿಮಯವಾಗಿದೆ. ಈ ರಸ್ತೆಯಿಂದ ಮಂಡಿ ಮೊಹಲ್ಲಾದ ಚಿಕ್ಕ ಮಾರುಕಟ್ಟೆ ಕಡೆ ತಿರುವು ಪಡೆಯುವ ಒಂದೇ ವಿಶೇಷ ಸ್ಥಳದಲ್ಲಿ ಹತ್ತಾರು ಗುಂಡಿಗಳಿವೆ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿರುವ ಪ್ರಕರಣಗಳು ನಡೆದಿವೆ.

ಮಳೆ ಬಂದಾಗ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ದ್ವಿಚಕ್ರವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ.

ಈ ಸಂಬಂಧವಾಗಿ ಸಾರ್ವಜನಿಕರು ಪಾಲಿಕೆ ವಲಯ ಕಚೇರಿ-7ಕ್ಕೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಇದು ಈ ಭಾಗದ ಜನರಿಗೆ ಶೋಕ ರಸ್ತೆಯಾಗಿ ಪರಿಣಮಿಸಿದೆ.

ಈಗ ಟೆಂಡರ್ ಪ್ರಕ್ರಿಯೆ
ರಸ್ತೆ ಹಾಳಾಗಿ ಹಲವಾರು ತಿಂಗಳುಗಳೇ ಕಳೆದಿದ್ದರೂ ದುರಸ್ತಿ ಮಾಡಲು ಈಗಷ್ಟೇ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದೀಗ ಟೆಂಡರ್ ಕರೆಯಲಾಗಿದೆ. ಈ ಟೆಂಡರ್‌ನಲ್ಲಿ ಇನ್ನು ಯಾರೂ ಗುತ್ತಿಗೆ ಪಡೆದಿಲ್ಲ. ಗುತ್ತಿಗೆಗೆ ನೀಡಿ ಪಾಲಿಕೆಯಿಂದ ಕ್ರಿಯಾ ಯೋಜನೆಗೆ ಅನುಮತಿ ನೀಡಿದ ನಂತರವೇ ಕೆಲಸ ಆರಂಭವಾಗಲಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಧಿಕಾರಿಗೆ ಅನೇಕ ಸಾರಿ ದೂರು ನೀಡಿದ್ದೇವೆ. ದುರಸ್ತಿ ಮಾಡಿಸುತ್ತೇವೆ, ಸದ್ಯಕ್ಕೆ ಗುಂಡಿ ಮುಚ್ಚಿಸುತ್ತೇವೆ ಎಂದೆಲ್ಲ ಹೇಳಿದ್ದರು. ಪ್ರವಾಸಿಗರು ಭೇಟಿ ನೀಡುವ ಸಂತ ಫಿಲೋಮಿನ ಚರ್ಚ್ ಹತ್ತಿರ ಒಮ್ಮೆ ಮಣ್ಣು ಹಾಕಿದ್ದರು. ಮಳೆ ಬಂದು ಕೊಚ್ಚಿಕೊಂಡು ಹೋಗಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿದ ಹಲವಾರು ವಾಹನ ಸವಾರರು ಬಿದ್ದು ಗಾಯಗೊಂಡಿದ್ದರೂ ಜನರ ಸಂಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
ರಸೂಲ್, ಸ್ಥಳೀಯರು

ಅಶೋಕ ರಸ್ತೆಯಲ್ಲಿರುವ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡರೆ ರಸ್ತೆ ಯಾವುದು, ಗುಂಡಿ ಯಾವುದು ಎನ್ನುವುದು ಗೊತ್ತಾಗುವುದಿಲ್ಲ. ಗುಂಡಿಗಳ ಬಗ್ಗೆ ಗೊತ್ತಿಲ್ಲದವರು ವೇಗವಾಗಿ ಬಂದರೆ ಗಾಡಿ ಕಂಟ್ರೋಲ್ ತಪ್ಪುತ್ತದೆ. ಈ ಬಗ್ಗೆ ಪಾಲಿಕೆಯವರು ಗಮನ ಹರಿಸಿ ದುರಸ್ತಿ ಮಾಡಿಸಿದರೆ ಜನಕ್ಕೆ ಅನುಕೂಲ ಆಗುತ್ತದೆ.
ಸೈಯದ್ ಫಾರೂಖ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ

ದಸರೆಗೂ ಮುಂಚೆ ರಸ್ತೆ ದುರಸ್ತಿ
ಅಶೋಕ ರಸ್ತೆಯಲ್ಲಿ ಹಲವೆಡೆ ಗುಂಡಿ ಬಿದ್ದಿರುವುದು ನಮ್ಮ ಗಮನಕ್ಕೆ ಬಂದಿದೆ. ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಈ ರಸ್ತೆ ದುರಸ್ತಿಗೆ ಈಗ ಟೆಂಡರ್ ಕರೆಯಲಾಗಿದೆ. ಯಾರಾದರೂ ಟೆಂಡರ್ ತೆಗೆದುಕೊಂಡರೆ ವರ್ಕ್ ಆರ್ಡರ್ ನೀಡಿ ತಕ್ಷಣ ದುರಸ್ತಿ ಮಾಡುತ್ತೇವೆ. ದಸರೆಗೂ ಮುಂಚೆ ರಸ್ತೆಗಳ ದುರಸ್ತಿ ಮಾಡಿಸುತ್ತೇವೆ. ಸದ್ಯಕ್ಕೆ ಆದಷ್ಟು ಬೇಗ ಗುಂಡಿ ಮುಚ್ಚಲು ವ್ಯವಸ್ಥೆ ಮಾಡುತ್ತೇವೆ.
• ರಾಜೀವ್‌ನಾಥ್, ಡಿಒ, ಪಾಲಿಕೆ ವಲಯ ಕಚೇರಿ-7

 

Tags:
error: Content is protected !!