Mysore
27
broken clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಟಿಕೆಟ್ ಮಾರಾಟದಲ್ಲೂ ಕೃಷ್ಣಂ ಪ್ರಣಯ ಸಖಿ ಹೊಸ ದಾಖಲೆ

“ಕೃಷ್ಣಂ ಪ್ರಣಯ ಸಖಿ” ಸಿನಿಮಾ ವಿಮರ್ಶಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಂಡಿದ್ದು, ಅಷ್ಟೆ ಶ್ರೇಷ್ಠ ಜನಪ್ರಿಯತೆಯನ್ನು ಸಹ ಗಳಿಸಿದೆ. ಈ ಜನಪ್ರಿಯತೆ ಪ್ರೇಕ್ಷಕರನ್ನ ಚಿತ್ರಮಂದಿರದತ್ತ ಕರೆತರುತ್ತಿದೆ. ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ, ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಲಕ್ಷಾಂತರ ರೂಪಾಯಿ ಕಮಾಯಿ ಗಳಿಸಿದೆ.

“ಬುಕ್ ಮೈ ಶೋ”ನ ಪ್ರಕಾರ, ಶನಿವಾರ ದಕ್ಷಿಣ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಸಿನಿಮಾಗಳಿಗಿಂತ (ತಂಗಲಾನ್ ಹೊರತುಪಡಿಸಿ) “ಕೃಷ್ಣಂ ಪ್ರಣಯ ಸಖಿ”ಗೆ ಹೆಚ್ಚು ಟಿಕೆಟ್ ಮಾರಾಟವಾಗಿದೆ. ಈ ಚಿತ್ರ 49,000ಕ್ಕೂ ಹೆಚ್ಚು ಟಿಕೇಟುಗಳನ್ನು ಮಾರಾಟ ಮಾಡಿದೆ. “ದುನಿಯಾ ವಿಜಯ್” ಅವರ “ಭೀಮ” ಸಿನಿಮಾದ ನಂತರ, ಇನ್ನೊಂದು ಕನ್ನಡ ಸಿನಿಮಾವೂ ಈ ರೀತಿಯ ಯಶಸ್ಸು ಪಡೆಯುತ್ತಿರುವುದು ಕನ್ನಡ ಸಿನಿಮಾಗಳ ಗೆಲುವಾಗಿದೆ ಎನ್ನಬಹುದು. “ಬುಕ್ ಮೈ ಶೋ” ತಮ್ಮ ಸ್ಕ್ರೀನ್ ಶಾಟ್ ಹಂಚಿಕೊಂಡು, ಭಾನುವಾರದ ನಮ್ಮ ಆಯ್ಕೆ ಕನ್ನಡ ಸಿನಿಮಾವೇ ಆಗಿರಲಿ ಎಂದು ಪ್ರೋತ್ಸಾಹ ನೀಡಿದ್ದಾರೆ.

ಬಾಕ್ಸ್ ಆಫೀಸ್ನಲ್ಲಿಯೇ ಅಲ್ಲ, ಟಿಕೆಟ್ ಮಾರಾಟದಲ್ಲಿಯೂ “ಕೃಷ್ಣಂ ಪ್ರಣಯ ಸಖಿ” ಹೊಸ ದಾಖಲೆ ನಿರ್ಮಿಸಿದೆ. “ಗೋಲ್ಡನ್ ಸ್ಟಾರ್” ಗಣೇಶ್ ಅವರ ಈ ಚಿತ್ರ ಒಟ್ಟಾರೆ ದಕ್ಷಿಣ ಭಾರತದ ಟಿಕೆಟ್ ಬುಕ್ಕಿಂಗ್ ನಲ್ಲಿ ಹೊಸ ಶ್ರೇಣಿಯ ದಾಖಲೆ ಬರೆದಿದೆ. ಪುಸ್ತಕೋದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ವೀರಕಪುತ್ರ ಶ್ರೀನಿವಾಸ್ ಈ ಮಾಹಿತಿಯನ್ನು ತಮ್ಮ ಪೋಸ್ಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Tags:
error: Content is protected !!