Mysore
28
few clouds

Social Media

ಬುಧವಾರ, 14 ಜನವರಿ 2026
Light
Dark

ಉಸಿರಾಟ ತೊಂದರೆ: ಮಾಲಿವುಡ್‌ ನಟ ಮೋಹನ್‌ ಲಾಲ್‌ ಆಸ್ಪತ್ರೆಗೆ ದಾಖಲು

ಕೇರಳ: ತೀವ್ರ ಉಸಿರಾಟದ ತೊಂದರೆ, ಜ್ವರ ಮತ್ತು ಸ್ನಾಯು ಸೆಳೆತದಿಂದಾಗಿ ಮಲಯಾಳಂನ ಖ್ಯಾತ ನಟ ಮೋಹನ್‌ ಲಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

64 ವರ್ಷದ ಮಲಯಾಳಂನ ಮೋಹನ್‌ ಲಾಲ್‌ ಅವರು ದಿಢೀರ್‌ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ 5 ದಿನಗಳ ವರೆಗೆ ವಿಶ್ರಾಂತಿ ಪಡೆಯುವ ಮೂಲಕ ಚೇತರಿಸಿಕೊಳ್ಳುವಂತೆ ಸೂಚಿಸಲಾಗಿದೆ . ಇನ್ನು ಈ ಆಸ್ಪತ್ರೆ ಹೇಳಿಕೆಯನ್ನು ಶ್ರೀಧರ್‌ ಪಿಳ್ಳೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮಲಯಾಳಂ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ಅವರು, ಸದ್ಯ ಕನ್ನಡದ ಖ್ಯಾತ ನಿರ್ದೇಶಕ ನಂದ ಕಿಶೋರ್‌ ನಿರ್ದೇಶನದ ವೃಷಭ ಚಿತ್ರದಲ್ಲಿ ಮೋಹನ್‌ ಲಾಲ್‌ ನಟಿಸುತ್ತಿದ್ದಾರೆ.

Tags:
error: Content is protected !!