ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ 19ರ ಮೊದಲ ಎಲಿಮೆಂಟ್ ಅಳವಡಿಕೆ ಶುಕ್ರವಾರ ಸಕ್ಸಸ್ ಆಗಿದ್ದರಿಂದ ಜನಪ್ರತಿನಿಧಿಗಳು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಸತತ ಎರಡು ದಿನಗಳಿಂದ ಈ ಕಾರ್ಯಚರಣೆ ನಡೆಯುತ್ತಿತ್ತು, ಅಳವಡಿಕೆಗೆ ಅಡ್ಡಿಯಾಗಿ ಸ್ಕೈವಾಕ್ ತೆರವು ಮಾಡಿದ ಬೆನ್ನಲ್ಲೇ ಮೊದಲ ಹಂತದ ಎಲಿಮೆಂಟ್ ಅಳವಡಿಕೆ ಯಶಸ್ವಿಯಾಗಿದೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ್ ಹಿಟ್ನಾಳ, ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಅನೇಕರು ಸಿಹಿ ಹಂಚಿ ಖುಷಿಪಟ್ಟರು.
ಎಲ್ಲರೂ ಸೇರಿ ಜಲಾಶಯಗಳ ಗೇಟ್ ಮತ್ತು ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ಅವರಿಗೆ ಕೈಕುಲಕಿ ಅಭಿನಂದನೆ ಸಲ್ಲಿಸಿದರು.
ಸಿಎಂ ಹಾಗೂ ಡಿಸಿಎಂ ಕೂಡಾ ಕಾರ್ಯಾಚರಣೆಯನ್ನು ಲೈವ್ ಆಗಿ ನೋಡಿದ್ದಾರೆ. ನಾಳೆ ಸಂಜೆಯವರೆಗೆ ಉಳಿದ ಎಲಿಮೆಂಟ್‌ಗಳನ್ನು ಅಳವಡಿಸಲಾಗುತ್ತದೆ. ರೈತರ ಬೆಳಗೆ ನೀರು ಕೊಡುವ ಕೆಲಸ ಮಾಡುತ್ತೇವೆ ಎಂದು ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ.