Mysore
29
moderate rain

Social Media

ಗುರುವಾರ, 17 ಸೆಪ್ಟೆಂಬರ್ 2026
Light
Dark

ತುಂಗಭದ್ರಾ ಡ್ಯಾಂನ ಕ್ರಸ್ಟ್‌ ಗೇಟ್‌ ಚೈನ್‌ ಲಿಂಗ್‌ ಕಟ್‌

ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ನ ಚೈನ್‌ಲಿಂಗ್‌ ಕಟ್ಟಾಗಿದೆ. ಈ ಕಾರಣದಿಂದಾಗಿ ನದಿಗೆ ಅಪಾರ ಪ್ರಮಾಣದ ನೀರು ಹರಿಯಬಿಡಲಾಗುತ್ತಿದೆ. ಕ್ರಸ್ಟ್‌ಗೇಟ್‌ ಸಂಖ್ಯೆ 19ರ ಚೈನ್‌ ಲಿಂಗ್‌ ತುಂಡಾಗಿದ್ದು, ನೀರಿನ ರಭಸಕ್ಕೆ ತುಂಡಾಗಿರುವ ಭಾಗವು ಸಹಾ ಕಾಣುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿನಿವಾರ ತಡರಾತ್ರಿ 11 ಗಂಟೆ ವೇಳೆಯಲ್ಲಿ ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಚೈನ್‌ಲಿಂಕ್‌ ಕಟ್ಟಾಗಿರಬಹುದು ಎಂದು ಊಹಿಸಲಾಗಿದೆ.

ಒಟ್ಟು 105 ಟಿಎಂಸಿ ನೀರಿನ ಸಾಮರ್ಥ್ಯ ಇರುವ ಈ ಜಲಾಶಯದಲ್ಲಿನ ಗೇಟ್‌ ನಂ.19ರ ಚೈನ್‌ ಲಿಂಗ್‌ ಮುರಿದುಬಿದ್ದಿದ್ದು, ಇದರಲ್ಲಿಯೇ ಸುಮಾರು 45 ಕ್ಯೂಸೆಕ್ಸ್‌ ನೀರನ್ನು ಬಿಡಲಾಗುತ್ತಿದೆ. ಉಳಿದ ಗೇಟ್‌ಗಳಿಂದ 75 ಸಾವಿರ ಕ್ಯೂಸೆಕ್ಸ್‌ ನೀರನ್ನು ಹರಿಯಬಿಡಲಾಗುತ್ತಿದ್ದು, ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಉಂಟಾಗಿದೆ.

Tags:
error: Content is protected !!