ಯಾವುದೇ ಕ್ರೀಡೆಯಾದರೂ ಅಲ್ಲಿ ಸೋಲು-ಗೆಲುವು ಸಾಮಾನ್ಯ. ಗೆದ್ದಾಗ ಬೀಗಬಾರದು ಸೋತಾಗ ಕುಗ್ಗಬಾರದು. ಅದೇ ಕ್ರೀಡಾಸ್ಫೂರ್ತಿ. ಆದರೆ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡದ ಸೋಲು ನಿಜಕ್ಕೂ ಒಪ್ಪಿಕೊಳ್ಳುವ ಸೋಲಲ್ಲ.
ಸೋಲು ಗೌರವಾನ್ವಿತವಾಗಿರಬೇಕೇ ವಿನಾ ಶರಣಾಗತಿಯಂತಿರಬಾರದು. ಆದರೆ ಶ್ರೀಲಂಕಾದ ಆತಿಥ್ಯದಲ್ಲಿ ನಡೆದಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ 3 ಪಂದ್ಯಗಳ ಪೈಕಿ ಎರಡನ್ನು ಹೀನಾಯವಾಗಿ ಸೋತಿದಲ್ಲದೇ ಒಂದು ಪಂದ್ಯವನ್ನು ಮಾಡಿಕೊಂಡಿದೆ. ಭಾರತೀಯ ತಂಡದಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಶುಭನ್ ಗಿಲ್, ಶ್ರೇಯಸ್ ಅಯ್ಯರಂತಹ ಅನುಭವಿ ಆಟಗಾರರಿದ್ದರೂ ಭಾರತ 230-240 ರನ್‌ಗಳ ಮೊತ್ತವನ್ನೂ ಬೆನ್ನಟ್ಟಲು ಸಾಧ್ಯವಾಗಿಲ್ಲ ಎಂದರೆ ಇದನ್ನು ಸೋಲು ಎನ್ನುವುದಕ್ಕಿಂತಲೂ ಶರಣಾಗತಿ ಎಂದೇ ಹೇಳಬೇಕು. ಎನ್ನಬಹುದು. ಅಲ್ಲದೆ ನಡೆದ ಮೂರು ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ 231 ರನ್‌ಗಳನ್ನು ಗಳಿಸಲಾಗದೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಜತೆಗೆ ಆಲ್‌ಔಟ್ ಆಗಿತ್ತು. ಉಳಿದ ಎರಡು ಪಂದ್ಯಗಳಲ್ಲಿಯೂ ಆಲೌಟ್ ಆಗಿರುವುದಲ್ಲದೆ 32 ಮತ್ತು 110 ರನ್‌ಗಳ ಭಾರಿ ಅಂತರದ ಸೋಲು ಅನುಭವಿಸಿದೆ. ಭಾರತೀಯ ಕ್ರಿಕೆಟ್ ತಂಡದ ಈ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದ್ದು, ಗೌತಮ್ ಗಂಭೀರ್ ತರಬೇತುದಾರರಾಗಿ ಆಯ್ಕೆಯಾದ ಮೊದಲ ಸರಣಿಯಲ್ಲಿಯೇ ಈ ರೀತಿಯ ಸೋಲು ನಿಜಕ್ಕೂ ಬೇಸರ.
-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು,