Mysore
25
broken clouds

Social Media

ಭಾನುವಾರ, 05 ಏಪ್ರಿಲ 2026
Light
Dark

ಪಾದಯಾತ್ರೆಯಲ್ಲಿ ಭಾಗವಹಿಸಿರುವ ನಾಯಕರು ತಮ್ಮ ಬೇನಾಮಿ ಆಸ್ತಿ ಘೋಷಣೆ ಮಾಡಲಿ: ಎಂ.ಕೆ.ಸೋಮಶೇಖರ್‌

ಮೈಸೂರು: ಬಿಜೆಪಿ-ಜೆಡಿಎಸ್‌ನವರು ಮಾಡುತ್ತಿರುವ ಪಾದಯಾತ್ರೆ ಅವರ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಮಾಡುತ್ತಿರುವ ಪಾದಯಾತ್ರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಕಿಡಿಕಾರಿದರು.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ಭಾಗವಹಿಸಿರುವ ಘಟಾನುಘಟಿ ನಾಯಕರು ತಮ್ಮ ಬೇನಾಮಿ ಆಸ್ತಿ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

ಇವರು ಮಾಡುತ್ತಿರುವ ಪಾದಯಾತ್ರೆ ಬರೀ ಡೋಂಗಿ ಪಾದಯಾತ್ರೆ. ಪಾದಯಾತ್ರೆಗೆ ಜನರನ್ನು ಹಣ ಕೊಟ್ಟು ಕರೆದುಕೊಂಡು ಬರಲಾಗುತ್ತಿದೆ. ಇದು ಎಚ್‌ಡಿಕೆ ಹಾಗೂ ವಿಜಯೇಂದ್ರ ಪ್ರಯೋಜಕತ್ವದ ಪಾದಯಾತ್ರೆ ಎಂದು ಟೀಕೆ ಮಾಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಒಬ್ಬ ಪ್ರಾಮಾಣಿಕ ಮುಖ್ಯಮಂತ್ರಿ. ಅವರು ಪಾರದರ್ಶಕ ಆಡಳಿತ ಕೊಡುತ್ತಿರುವ ಸಿಎಂ. ಆದರೆ ವಿನಾ ಕಾರಣ ಸಿದ್ದರಾಮಯ್ಯರ ಮೇಲೆ ಆಪಾದನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ವಿರುದ್ಧ ಕಿಡಿಕಾರಿದರು.

ಇನ್ನು ಪಾದಯಾತ್ರೆಯಲ್ಲಿ ಭಾಗವಹಿಸಿರುವ ಘಟಾನುಘಟಿ ನಾಯಕರೆಲ್ಲಾ ತಮ್ಮ ಬೇನಾಮಿ ಆಸ್ತಿಗಳನ್ನು ಘೋಷಣೆ ಮಾಡಲಿ. ಈ ಮೂಲಕ ಅವರು ಎಷ್ಟು ಪ್ರಾಮಾಣಿಕರು ಎಂಬುದನ್ನು ಸಾಬೀತುಪಡಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ಏಳಿಗೆ ಸಹಿಸಲಾಗದೇ ಈ ರೀತಿ ಮಾಡುತ್ತಿದ್ದಾರೆ. ಸಿಎಂ ಕುರ್ಚಿಗೆ ಯಾವುದೇ ಧಕ್ಕೆ ಆಗಲ್ಲ ಎಂದು ಸಿಎಂ ಸಿದ್ದು ಪರ ಬ್ಯಾಟ್‌ ಬೀಸಿದರು.

 

 

Tags:
error: Content is protected !!