Mysore
29
scattered clouds

Social Media

ಭಾನುವಾರ, 24 ಮೇ 2026
Light
Dark

ವಯನಾಡು ಭೂ ಕುಸಿತ: ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಮೈಸೂರಿನ ಕೆ.ಆರ್‌ ಆಸ್ಪತ್ರೆಯಲ್ಲಿ ಕೊಠಡಿ ಮೀಸಲು

ಮೈಸೂರು: ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ. ಪರಿಹಾರ ಹಾಗೂ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಭಾರತೀಯ ಸೇನೆಯು ತಾತ್ಕಲಿಕ ಸೇತುವೆಯ ಮೂಲಕ ಸುಮಾರು 1000 ಗಾಯಾಳುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಇನ್ನು ಕೇರಳಕ್ಕೆ ಅಗತ್ಯ ನೆರವು ಘೋಷಿಸಿರುವ ಸಿಎಂ ಸಿದ್ದರಾಮಯ್ಯ, ದುರಂತದ ರಕ್ಷಣೆಗೆ ಅಧಿಕಾರಿಗಳ ಜೊತೆ ಸಚಿವ ಸಂತೋಷ್‌ ಲಾಡ್‌ರನ್ನು ನೇಮಿಸಿದ್ದಾರೆ.

ಮೈಸೂರಿನ ಕೆಆರ್‌ ಆಸ್ಪತ್ರೆಯಲ್ಲಿ ಕೇರಳದ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಎರಡು ಕೊಠಡಿ ಮೀಸಲು ಇಡಲಾಗಿದೆ.

ಕೆಆರ್‌ ಆಸ್ಪತ್ರೆಯಲಿ ಒಟ್ಟು 15 ಬೆಡ್‌ಗಳನ್ನು ಕಾಯ್ದಿರಿಸಿದ್ದು, ಅಗತ್ಯವಾದ ಔಷಧಿಗಳು, ಎರಡಡು ಆಕ್ಸಿಜನ್‌ ಸಿಲಿಂಡರ್‌, ದಿನದ 24 ಗಂಟೆಯು ಒಬ್ಬ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದೇವೆ. ತುರ್ತು ಚಿಕಿತ್ಸಾ ಘಟಕದಲ್ಲಿ ಮೂರು ಬೆಡ್‌ಗಳು ಇವೆ. ಮೊದಲು ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅವಶ್ಯ ಬಿದ್ದರೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಕೆಆರ್‌ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಮೆಡಿಕಲ್‌ ಕಾಲೇಜು ಡೀನ್‌ ದ್ರಾಕ್ಷಾಯಿಣಿ ತಿಳಿಸಿದ್ದಾರೆ.

 

Tags:
error: Content is protected !!