Mysore
28
scattered clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಓದುಗರ ಪತ್ರ| ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಭದ್ರತೆ ಅಗತ್ಯ

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ 2024ರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದ್ದು, ಕ್ರೀಡಾಕೂಟ ಪ್ರಾರಂಭಕ್ಕೂ ಮುನ್ನ ಕೆಲ ಆತಂಕವಾದಿಗಳು ಫ್ರಾನ್ಸ್‌ನ ರೈಲ್ವೆ ಇಲಾಖೆಗೆ ಸೇರಿದ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಚ್ಚಿ ಆತಂಕ ಸೃಷ್ಟಿಸಿದ್ದಾರೆ.

ಈ ಕ್ರೀಡಾಕೂಟದಲ್ಲಿ ವಿಶ್ವದ ನಾನಾ ದೇಶಗಳ ಕ್ರೀಡಾಪಟುಗಳ ಜತೆಗೆ ಭಾರತದ 117 ಕ್ರೀಡಾಪಟುಗಳೂ ಭಾಗವಹಿಸಿದ್ದಾರೆ. ಆದರೆ ಫ್ರಾನ್ಸ್‌ನಲ್ಲಿ ನಡೆದ ಈ ದಾಳಿ ಕ್ರೀಡಾಪಟುಗಳಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಈ ಕ್ರೀಡಾಪಟುಗಳು ತಂಗಿರುವ ಹೋಟೆಲ್ ಹಾಗೂ ಕ್ರೀಡೆಗಳು ನಡೆಯುವ ಕ್ರೀಡಾಂಗಣಗಳಿಗೆ ಬಿಗಿ ಬಂದೋಬಸ್ತ್ ಒದಗಿಸಿ ಬೇಕಿದೆ.

ಈ ಕ್ರೀಡಾಕೂಟವನ್ನು ವೀಕ್ಷಿಸಲು ವಿಶ್ವದ ವಿವಿಧ ದೇಶಗಳ ಲಕ್ಷಾಂತರ ಮಂದಿ ಫ್ರಾನ್ಸ್‌ಗೆ ಆಗಮಿಸಿದ್ದು, ಅವರ ರಕ್ಷಣೆಯ ಹೊಣೆಯೂ ಫ್ರಾನ್ಸ್‌ನ ಮೇಲಿದೆ. ಇನ್ನು ಭಾರತೀಯ ಕ್ರೀಡಾಪಟುಗಳಿಗೆ ರಕ್ಷಣೆ ನೀಡುವುದು ಫ್ರಾನ್ಸ್ ದೇಶದ ಕರ್ತವ್ಯ ಎಂದು ಸುಮ್ಮನಾಗದೆ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಾಂಗ ಸಚಿವರೊಂದಿಗೆ ಚರ್ಚಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಭಾರತದ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಸೂಚಿಸಬೇಕಿದೆ. ಅವರು ಯಾವುದೇ ಅಂಜಿಕೆ ಇಲ್ಲದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಸುರಕ್ಷಿತವಾಗಿ ದೇಶಕ್ಕೆ ಮರಳುವವರೆಗೂ ರಕ್ಷಣೆ ನೀಡಬೇಕಿದೆ.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು.

Tags:
error: Content is protected !!