Mysore
90
scattered clouds

Social Media

ಗುರುವಾರ, 28 ಮೇ 2026
Light
Dark

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ಭೇಟಿ ಮಾಡಿದ ನಟ ವಿನೋದ್‌ ರಾಜ್‌

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರನ್ನು ಇಂದು ನಟ ವಿನೋದ್‌ ರಾಜ್‌ ಅವರು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು, ಪರಪ್ಪನ ಅಗ್ರಹಾರದಲ್ಲಿ ಜೈಲು ಪಾಲಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ನಟ ದರ್ಶನ್‌ರಿಗೆ ಸಮಾಧಾನ ಹೇಳಲು ಕನ್ನಡ ಚಿತ್ರರಂಗದ ನಟರು ಆಗಾಗ್ಗೆ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಕನ್ನಡ ಚಿತ್ರರಂಗದ ಸ್ಟಾರ್‌ ನಟ ವಿನೋದ್‌ ರಾಜ್‌ ಅವರು, ಜೈಲಿಗೆ ಭೇಟಿ ನೀಡಿ, ದರ್ಶನ್‌ಗೆ ಸಮಾಧಾನ ಮಾಡಿದ್ದಾರೆ.

ಜೈಲಿನ ಸೆಲ್‌ಗೆ ಬಳಿ ತೆರಳಿದ ವಿನೋದ್‌ ರಾಜ್‌ ಅವರು ದರ್ಶನ್‌ರನ್ನು ನೋಡಿ ಭಾವುಕರಾಗಿದ್ದಾರೆ ಎನ್ನಲಾಗಿದೆ. ಬಳಿಕ ದರ್ಶನ್‌ ಬಳಿ ಕೆಲಕಾಲ ಮಾತುಕತೆ ನಡೆಸಿದ ವಿನೋದ್‌ ರಾಜ್‌ ಅವರು, ನಟನಿಗೆ ಧೈರ್ಯ ಹಾಗೂ ಸಾಂತ್ವನ ಹೇಳಿದ್ದಾರೆ.

 

 

Tags:
error: Content is protected !!