Mysore
28
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ದರ್ಶನ್‌ ಬಗ್ಗೆ ಮೊದಲಭಾರಿಗೆ ಪ್ರತಿಕ್ರಿಯೆ ನೀಡಿದ ಧೃವಸರ್ಜಾ !

ಬೆಂಗಳೂರು : ಕಾನೂನಿಗಿಂತ ಯಾರು ದೊಡ್ಡವರಲ್ಲ. ಎಲ್ಲರೂ ಕಾನೂನಿನ ಮುಂದೆ ಸಮಾನರು ಎಂದು ಆಕ್ಷನ್‌ ಪ್ರಿಂನ್ಸ್‌ ಧೃವಸರ್ಜಾ ಅಭಿಪ್ರಾಯ ವ್ಯಕ್ತಪಡಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿ ಒಂದು ತಿಂಗಳು ಕಳೆದಿದೆ. ಇದೀಗ ಘಟನೆ ಬಗ್ಗೆ ಮೊದಲಭಾರಿಗೆ ಧೃವಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.

ಯಾರೇ ಆಗಲಿ, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪ್ರಜಾಪ್ರಭುತ್ವದಲ್ಲಿ ಮಹಾರಾಜರೇ ಕಾನೂನಿನ ಕೆಳೆಗೆ ಬರುತ್ತಾರೆ ಎಂದು ಹೇಳಿದ್ದಾರೆ. ದರ್ಶನ್‌ ಅವರಿಗೂ ಒಬ್ಬ ಮಗ ಇದ್ದಾನೆ. ಹಾಗೇ ರೇಣುಕಾಸ್ವಾಮಿಗೂ ಕುಟುಂಬ ಇದೆ. ಏನೇ ಆಗಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು.

Tags:
error: Content is protected !!