Mysore
15
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ನಾಳೆಯಿಂದ ಸಂಸತ್‌ ಬಜೆಟ್‌ ಅಧಿವೇಶನ

ನವದೆಹಲಿ: ನಾಳೆಯಿಂದ ಸಂಸತ್‌ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್.‌12ರವರೆಗೆ ನಡೆಯಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜುಲೈ.23ರಂದು ಕೇಂದ್ರ ಸರ್ಕಾರದ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದ್ದಾರೆ.

ನಾಳೆ ಅಧಿವೇಶನದ ಮೊದಲ ದಿನವಾಗಿದ್ದು, ನಿರ್ಮಲಾ ಸೀತಾರಾಮನ್‌ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಲಿದ್ದಾರೆ. ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಒಟ್ಟು 6 ಮಸೂದೆಗಳನ್ನು ಮಂಡಿಸಲು ಸಿದ್ಧತೆ ಮಾಡಿಕೊಂಡಿದೆ.

ಮಂಗಳವಾರ ಕೇಂದ್ರ ಸರ್ಕಾರದ ಪೂರ್ಣ ಬಜೆಟ್‌ ಮಂಡನೆ ಆಗಲಿದ್ದು, ರೈತರಿಗೆ ಸಿಗುವ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ಹೆಚ್ಚುವರಿಯಾಗಲಿದೆ ಎನ್ನಲಾಗಿದೆ. ಇದರ ಜೊತೆಗೆ ಮಹಿಳೆಯರು, ಕಾರ್ಮಿಕರು ಸೇರಿದಂತೆ ಅನೇಕ ಮಧ್ಯಮ ವರ್ಗದ ಜನತೆಗೆ ಬಜೆಟ್‌ನಲ್ಲಿ ಬಂಪರ್‌ ಆಫರ್‌ ಘೋಷಣೆಯಾಗಲಿದೆ ಎನ್ನಲಾಗಿದ್ದು, ಈಗ ಎಲ್ಲರ ಚಿತ್ತ ಕೇಂದ್ರ ಸರ್ಕಾರದ ಬಜೆಟ್‌ನತ್ತ ನೆಟ್ಟಿದೆ.

ಬಜೆಟ್‌ ಮಂಡಿಸಿದ ಬಳಿಕ ಬಜೆಟ್‌ ವಿರುದ್ಧ ವಿಪಕ್ಷಗಳು ಕಿಡಿಕಾರುವ ಸಂಭವವಿದ್ದು, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಈ ಅಧಿವೇಶನದಲ್ಲಿ ಏನೆಲ್ಲಾ ಚರ್ಚೆ ಮಾಡಲು ಸಜ್ಜಾಗಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Tags:
error: Content is protected !!