Mysore
27
overcast clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಭಾರೀ ಮಳೆಗೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ

ಗುಂಡ್ಲುಪೇಟೆ: ಕಳೆದ ಕೆಲ ದಿನಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಬಂಡೀಪುರ ಉದ್ಯಾನವನ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ಕೂಡ ಸ್ವಚ್ಛಂದವಾಗಿ ವಿಹರಿಸುತ್ತಿವೆ.

ಪ್ರವಾಸಿಗರು ರಸ್ತೆ ಸಂಚರಿಸುವ ಮಾರ್ಗದಲ್ಲೂ ಕೂಡ ಹಸಿರು ಹುಲ್ಲು ಎದ್ದು ಕಾಣುತ್ತಿದ್ದು, ಆನೆ, ಕಾಡೆಮ್ಮೆ, ಚಿರತೆ, ಹುಲಿಗಳು ಹೆಚ್ಚಿನ ರೀತಿಯಲ್ಲಿ ಸಫಾರಿ ಹಾಗೂ ರಸ್ತೆ ಬದಿಯಲ್ಲೇ ಸಿಗುತ್ತಿವೆ.

ಹೆದ್ದಾರಿಯ ಎರಡೂ ಬದಿಗಳು ಹಚ್ಚ ಹಸಿರಿನಿಂದ ಕೂಡಿದ್ದು, ಪ್ರವಾಸಿಗರು ಫುಲ್‌ ಖುಷ್‌ ಆಗಿದ್ದಾರೆ. ಇದರ ಜೊತೆಗೆ ಹಲವು ಮಂದಿ ತಮ್ಮ ಮೊಬೈಲ್‌ನಲ್ಲಿ ಇಲ್ಲಿನ ಪ್ರಕೃತಿ ಸೊಬಗನ್ನು ಸೆರೆಹಿಡಿಯುತ್ತಿದ್ದಾರೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಸಿರಿನಿಂದ ಕೂಡಿರುವುದರಿಂದ ಸಫಾರಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸಲಿದ್ದು, ಬಂಡೀಪುರ ಆದಾಯ ಮತ್ತಷ್ಟು ದ್ವಿಗುಣಗೊಳ್ಳಲಿದೆ ಎನ್ನಲಾಗಿದೆ.

 

Tags:
error: Content is protected !!