ಹಾಸನ : ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗಲ್ಲ ಅಂತೀರಾ, ನೀವಾದರೂ ಬನ್ನಿ. ನಿಮಗೆ ಬರುವ ಯೋಗ್ಯತೆ ಇಲ್ವಾ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡದರೆ ಏನು ಪ್ರಯೋಜನವಿಲ್ಲ ಎಂಬ ಡಿಕೆಶಿ ಹೇಳಿಕೆ ಪ್ರತಿಕ್ರಿಯಿಸಿದ ಅಶೋಕ್, ಡಿಕೆ ಶಿವಕುಮಾರ್ ಬಂದರೆ ಪ್ರಯೋಜನ ಆಗುತ್ತ ಅಂದರೆ ಅವರು ಮನೆ ಬಿಟ್ಟು ಬರಬೇಕು. ಅವರು ಬರಲ್ಲ. ನೀವು ಬಂದು ಬೇರೆಯವರಿಗೆ ಬುದ್ದಿವಾದ ಹೇಳಿ. ನೀವು ಕೊಡುತ್ತಿರುವುದು NDRF ಹಣ. ನೀವು ನಯಾಪೈಸೆ ಕೊಟ್ಟಿಲ್ಲ. ಕುಮಾರಸ್ವಾಮಿ ಬರಲು ರೈಟ್ಸ್ ಇದೆ. ಕೇಳಲು ರೈಟ್ಸ್ ಇದೆ. ಕುಮಾರಸ್ವಾಮಿ ಕೇಂದ್ರ ಮಂತ್ರಿ ಇದ್ದಾರೆ. ರಾಷ್ಟ್ರೀಯ ಹೆದ್ದಾರಿ ಕೇಂದ್ರಕ್ಕೆ ಸೇರುತ್ತದೆ. ಎಲ್ಲರೂ ಒಕ್ಕೂಟದ ವ್ಯವಸ್ಥೆಯಲ್ಲಿದ್ದೀರಿ. ಕುಮಾರಸ್ವಾಮಿ ಅವರ ಕೈಯಲ್ಲಿ ಆಗಲ್ಲ ಅಂದರೆ ನೀವು ಬಂದು ಕೆಲಸ ಮಾಡಿ ಎಂದು ಕಿಡಿಕಾರಿದರು.
ಅಲ್ಲದೆ ಕುಮಾರಸ್ವಾಮಿ ದೇಶ ಎಲ್ಲಾ ಸುತ್ತಬೇಕು. ಅದರ ನಡುವೆ ಕರ್ನಾಟಕಕ್ಕೆ ಆದ್ಯತೆ ಕೊಟ್ಟು ಬರುತ್ತಿದ್ದಾರೆ. ನಿಮಗೆ ಯಾಕೆ ಬರಲು ಆಗುತ್ತಿಲ್ಲ. ಸರ್ಕಾರ ಸತ್ತು ಹೋಗಿದೆ. ಸರ್ಕಾರ ಬದುಕಿದ್ದರೆ ತಾನೇ ಏನಾದ್ರೂ ಕೇಳೋದು. ಸರ್ಕಾರ ಸ್ಕ್ಯಾಂಡಲ್ ಗಳಿಗೆ ಮುಳುಗಿ ಉತ್ತರ ಕೊಡಲು ಆಗುತ್ತಿಲ್ಲ. ಸರ್ಕಾರ ಬದುಕಿದೆ ಅಂತಾ ಮೊದಲು ತೋರಿಸಲಿ ಎಂದು ಹೇಳಿದ್ದಾರೆ.