Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಡ್ರೋನ್ ಕಣ್ಣಲ್ಲಿ ಕಪಿಲೆಯ ಮನಮೋಹಕ ದೃಶ್ಯ ಸೆರೆ

ನಂಜನಗೂಡು ; ಸತತ ಮಳೆಯಿಂದಾಗಿ ಎಚ್‌ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದಿಂದ ೩೬ ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದ್ದು, ಇದರಿಂದಾಗಿ ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಸ್ವಚ್ಛಂದವಾಗಿ ಕಪಿಲೆ ಹರಿಯುತ್ತಿದ್ದಾಳೆ.

ನಂಜನಗೂಡು ಸೇತುವೆ ಬಳಿ ಮೈದುಂಬಿ ಹರಿಯುತ್ತಿರುವ ಕಪಿಲೆಯ ಮನಮೋಹಕ ದೃಶ್ಯ ಡ್ರೋನ್‌ ಕ್ಯಾಮಾರದಲ್ಲಿ ಸೆರೆಯಾಗಿದ್ದು ಕಣ್ಮನ ಸೆಳೆಯುತ್ತಿದೆ.

ಇನ್ನು ನಂಜನಗೂಡಿನ ನಂಜುಡೇಶ್ವರ ದೇವಾಲಯದ ಸ್ನಾನ ಘಟ್ಟ ಮುಳುಗಡೆಯಾಗಿದೆ. ಇನ್ನು ಕಪಿಲಾ ನದಿ ಉಕ್ಕಿಹರಿಯುತ್ತಿರುವುದರಿಂದ ನದಿಗೆ ಇಳಿಯದಂತೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸೂಚನೆ ನೀಡುತ್ತಿದ್ದಾರೆ. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಮತ್ತೊಂದು ಕಡೆ ೧೬ ಕಾಲು ಮಂಟಪ ಸಹ ಮುಳುಗಡೆಯಾಗಿದೆ.  ಜೊತೆಗೆ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ಸಹ ನೀಡಲಾಗಿದೆ.

 

Tags: