Mysore
22
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ನಿಮ್ಮೆಲ್ಲರ ನಿರೀಕ್ಷೆಯಂತೆ ಕೇಂದ್ರದಲ್ಲಿ ನನಗೆ ಕೃಷಿ ಖಾತೆ ಸಿಕ್ಕಿಲ್ಲ: ಮಂಡ್ಯದಲ್ಲಿ ಎಚ್.ಡಿ ಕುಮಾರಸ್ವಾಮಿ ಬೇಸರ

ಮಂಡ್ಯ: ತಮಗೆ ಕೇಂದ್ರದಲ್ಲಿ ಕೃಷಿ ಖಾತೆ ಕೈತಪ್ಪಿದ್ದಕ್ಕೆ ಜೆಡಿಎಸ್‌ ರಾಜ್ಯಾದ್ಯಕ್ಷ ಎಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ(ಜು.15)ಪಾಂಡವಪುರದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಎಚ್‌ ಡಿ ಕುಮಾರಸ್ವಾಮಿ ತಮಗೆ ಕೃಷಿ ಖಾತೆ ಸಿಗದೆ ಇರುವ ನೋವು ಹೊರಹಾಕಿ, ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸಾವಿರಕ್ಕೂ ಹೆಚ್ಚು ರೈತು ಆತ್ಮಹತ್ಯೆಯಾಗಿದೆ. ಇದನ್ನು ಕಂಡು ನನಗೆ ಅತೀವ ದುಖಃ ಉಂಟಾಗಿದೆ ಎಂದು ಹೇಳಿದರು.

ನಿಮ್ಮೆಲ್ಲರ ನಿರೀಕ್ಷೆಯಂತೆ ನಾನು ನನಗೂ ಕೇಂದ್ರದಲ್ಲಿ ಕೃಷಿ ಸಚಿವನಾಗುವ ಭರವಸೆ ಇತ್ತು. ಆದರೆ ಆ ಖಾತೆ ಸಿಗಲಿಲ್ಲ. ದೇವರು ನನಗೆ ಮುಂದೆ ಇನ್ನು ದೊಡ್ಡ ಮಟ್ಟದ ಶಕ್ತಿ ಕೊಡುತ್ತಾನೆ ಎಂಬ ನಂಬಿಕೆ ಇದೆ. ಮಂಡ್ಯದ ನನ್ನ ಗೆಲುವು ಜನತೆಯ ಗೆಲುವು. ಕುಮಾರಣ್ಣ ಗೆದ್ದರೆ ಮಂಡ್ಯಕ್ಕೆ ಮಾತ್ರವಲ್ಲ, ಇಡೀ ರೈತ ಸಮುದಾಯಕ್ಕೆ ಉಪಯೋಗ ಎಂದು ನೀವೇ ಆಯ್ಕೆ ಮಾಡಿದ್ದಿರಿ. ಅಧಿಕಾರಕ್ಕೆ ಬಂದ ನಂತರ ರೈತರ ನೆರವಿಗೆ ಬರ್ತೀನಿ ಎಂದಿದ್ದೆ. ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಅವರು ಹೇಳಿದರು.

 

Tags:
error: Content is protected !!