Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

‘ಟಾಕ್ಸಿಕ್‍’ ಚಿತ್ರಕ್ಕಾಗಿ ಹೊಸ ಲುಕ್‍ನಲ್ಲಿ ಯಶ್‍

ಕಳೆದ ಕೆಲವು ವರ್ಷಗಳಿಂದ ಒಂದೇ ಗೆಟಪ್‍ನಲ್ಲಿದ್ದ ಯಶ್‍, ಇದೀಗ ತಮ್ಮ ಗೆಟಪ್‍ ಬದಲಿಸಿದ್ದಾರೆ. ಕೂದಲು ಕತ್ತರಿಸಿ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹೊಸ ಲುಕ್‍ನಲ್ಲಿ ಇದೇ ಮೊದಲ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ಶುಕ್ರವಾರ, ಮುಂಬೈನಲ್ಲಿ ಮುಕೇಶ್‍ ಅಂಬಾನಿ ಅವರ ಮಗ ಅನಂತ್‍ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಇತ್ತು. ಈ ಸಂದರ್ಭದಲ್ಲಿ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಕನ್ನಡದಿಂದ ಯಶ್‍ ಸಹ ಮದುವೆಯಲ್ಲಿ ಭಾಗವಹಿಸಿದ್ದರು. ಮುಂಬೈ ಏರ್‍ಪೋರ್ಟ್‍ನಲ್ಲಿ ಯಶ್‍ ಕಾಣಿಸಿಕೊಂಡಾಗ, ಅವರ ಹೊಸ ಲುಕ್‍ ಬಹಳ ವೈರಲ್‍ ಆಗಿದೆ.

ಅಂದಹಾಗೆ, ಯಶ್‍ ಈ ಗೆಟಪ್‍ ಮಾಡಿಸಿಕೊಂಡಿರುವುದು ತಮ್ಮ ಮುಂದಿನ ಚಿತ್ರ ‘ಟಾಕ್ಸಿಕ್‍’ಗಾಗಿ. ‘ಕೆಜಿಎಫ್‍’ಗಾಗಿ ಗಡ್ಡ ಬಿಟ್ಟಿದ್ದ ಯಶ್‍, ಅಲ್ಲಿಂದ ಇಲ್ಲಿಯವರೆಗೂ ಅದನ್ನು ಮುಂದುವರೆಸಿದ್ದಾರೆ. ಆದರೆ, ಅವರ ಉದ್ಧಗೂದಲಿಗೆ ಕತ್ತರಿ ಬಿದ್ದಿದೆ. ಯಶ್‍ ತಮ್ಮ ಕೂದಲು ಶಾರ್ಟ್ ಮಾಡಿಸಿದ್ದಾರೆ. ಇದೇ ಲುಕ್‍ನಲ್ಲಿ ಅವರು ‘ಟಾಕ್ಸಿಕ್‍’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯಶ್‍ ಅಭಿನಯದ 19ನೇ ಚಿತ್ರವಾದ ‘ಟಾಕ್ಸಿಕ್‍’ ಈ ವರ್ಷದ ಆರಂಭದಲ್ಲಿ ಘೋಷಣೆಯಾಗಿತ್ತು. ಅಲ್ಲಿಂದ ಚಿತ್ರದ ಕುರಿತು ಹಲವು ಸುದ್ದಿಗಳು ಕೇಳಿಬರುತ್ತಲೇ ಇವೆ. ಸದ್ಯಕ್ಕೆ ಹೇಳುವುದಾದರೆ, ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದ್ದು, ಯಶ್‍ ಜೊತೆಗೆ ನಯನತಾರಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

‘ಟಾಕ್ಸಿಕ್‍’ ಚಿತ್ರವನ್ನು ಕೆವಿಎನ್‍ ಪ್ರೊಡಕ್ಷನ್ಸ್ ಸಂಸ್ಥೆಯಡಿ ಕೋನಾ ವೆಂಕಟ್‍ ನಿರ್ಮಿಸುತ್ತಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‍ ದಾಸ್‍ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಮೂಡಿಬರುತ್ತಿದೆ. ಇದಕ್ಕೂ ಮೊದಲು ಚಿತ್ರವನ್ನು ಮುಂದಿನ ವರ್ಷ ಏಪ್ರಿಲ್‍ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಸದ್ಯದ ಮಟ್ಟಿಗೆ ಇದು ಅನುಮಾನವಾಗಿದ್ದು, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಅಂದಹಾಗೆ, ಭಾರತ ಮತ್ತು ಲಂಡನ್‍ನಲ್ಲಿ ‘ಟಾಕ್ಸಿಕ್‍’ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಈ ಪೈಕಿ ಲಂಡನ್‍ನಲ್ಲೇ 150ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ.

Tags: