Mysore
20
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

೪೦ ಲಕ್ಷಕ್ಕೂ ಹೆಚ್ಚು ಅನರ್ಹ ಬಿಪಿಎಲ್ ಕಾರ್ಡ್ದಾದರರು ಪತ್ತೆ

ಬೆಂಗಳೂರು : ಒಂದು ಕಡೆ ಬಿಪಿಎಲ್‌ ಕಾರ್ಡ್‌ ಗಳಿಗೆ ಅರ್ಜಿ ಹಾಕಲು ಆಹಾರ ಇಲಾಖೆ ಈಗಷ್ಟೇ ಅವಕಾಶವನ್ನು ನೀಡುತ್ತಿದೆ. ಇದರ ಮಧ್ಯೆ ಬಿಪಿಎಲ್‌ ಕಾರ್ಡ್‌ ಗಳಲ್ಲಿ ಅನರ್ಹ ಫಲಾನುಭವಿಗಳು ಕಂಡು ಬಂದಿದ್ದು, ಇಲಾಖೆ ಭರ್ಜರಿ ಕಾರ್ಯಾಚರಣೆ ಶುರು ಮಾಡಿದೆ.

ರಾಜ್ಯದಲ್ಲಿ ನಿಯಮಗಳನ್ನ ಗಾಳಿಗೆ ತೂರಿ ಬಿಪಿಎಲ್‌ ಕಾರ್ಡ್‌ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಒಟ್ಟು ೪೦ ಲಕ್ಷಕ್ಕೂ ಹೆಚ್ಚು ಅನರ್ಹ ಬಿಪಿಎಲ್‌ ಕಾರ್ಡ್‌ದಾದರರು ಇರುವುದು ಪತ್ತೆಯಾಗಿದೆ. ಈ ಪಟ್ಟಿಯಲ್ಲಿ ಶೇ.೨೦ರಷ್ಟು ಕಾರ್ಡ್ ಗಳು ಬೆಂಗಳೂರಿನಲ್ಲಿಯೇ ಕಂಡು ಬಂದಿದೆ.

ಬಡತನ ರೇಖೆ ಮೇಲಿರುವವರು ಕೂಡ ಬಿಪಿಎಲ್‌ ಕಾರ್ಡ್‌ ಬಳಕೆ ಮಾಡುತ್ತಿದ್ದು, ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಮುಂದಾಗಿದೆ. ಅನರ್ಹರು ದುಬಾರಿ ವೆಚ್ಚದ ಆರೋಗ್ಯ ಸೇವೆ, ಕೃಷಿ ಉದ್ದೇಶಿತ ಯೋಜನೆ, ವಸತಿ ಯೋಜನೆಗಳಂತಹ ನಾನಾ ಸರ್ಕಾರಿ ಸೌಲಭ್ಯಗಳ ಬಳಕೆ ಮಾಡುವ ಸಲುವಾಗಿ ನಿಯಮಗಳನ್ನ ಮೀರಿ ಕಾರ್ಡ್‌ ಬಳಕೆ ಮಾಡುತ್ತಿದ್ದಾರೆ. ಜೊತೆಗೆ ಅರ್ಹತೆ ಇಲ್ಲದಿದ್ದರೂ ಕೂಡ  ಈ ಕಾರ್ಡ್‌ ಗಳನ್ನ ಬಳಸಿಕೊಂಡು ಅನ್ನಭಾಗ್ಯ, ಗೃಹಲಕ್ಷ್ಮೀ ಸೇರಿದಂತೆ ಸರ್ಕಾರದ ಇತರೆ ಸೌಲಭ್ಯಗಳನ್ನ ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಸಿಗಬೇಕಾಗಿರುವ ಎಷ್ಟೋ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿದ್ದು ಅನರ್ಹರ ಕಾರ್ಡ್‌ ಅನ್ನು ಎಪಿಎಲ್‌ ಪಟ್ಟಿಗೆ ಸೇರಿಸಲು ಆಹಾರ ಸರಬರಾಜು ಇಲಾಖೆ ಮುಂದಾಗಿದೆ.

Tags: