Mysore
26
few clouds

Social Media

ಬುಧವಾರ, 22 ಜನವರಿ 2025
Light
Dark

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ರೈತರಿಂದ ಪ್ರತಿಭಟನೆ

ಮಂಡ್ಯ : ತಮಿಳುನಾಡಿಗೆ ೧ ಟಿಎಂಸಿ ನೀರು ಬೀಡುವಂತೆ ಕರ್ನಾಟಕಕ್ಕೆ  ಆದೇಶ ಮಾಡಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.

CWRC ಆದೇಶಕ್ಕೆ ಖಂಡನೆ ವ್ಯಕ್ತಪಡಿಸಿ ಸಕ್ಕರೆ ನಾಡು ಮಂಡ್ಯದಲ್ಲಿ ರೈತರಿಂದ ಪ್ರತಿಭಟನೆ ನಡೆಸಲಾಯಿತು. ಅನ್ನದಾತರಿಗೆ ಕನ್ನಡ ಸೇನೆ ಹಾಗೂ ವಿವಿಧ ಸಂಘಟನೆಗಳು ಸಾಥ್‌ ನೀಡಿದ್ದು ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಮಂಡ್ಯದ ಸಂಜಯ್‌ ವೃತ್ತದಲ್ಲಿ ಹೆದ್ದಾರಿ ತಡೆದು ʻಈ ರೀತಿ ಮಾಡುವ ಬದಲು ರೈತರಿಗೆ ವಿಷ ಭಾಗ್ಯವನ್ನು ಕೊಟ್ಟುಬಿಡಿʼ ಎಂದು ಕಿಡಿಕಾರಿದರು. ಅಲ್ಲದೆ  CWRC ಆದೇಶವನ್ನು ಪಾಲಿಸದಂತೆ ಆಗ್ರಹಿಸಿದ ರೈತರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡದಂತೆ ಒತ್ತಾಯಿಸಿದರು

Tags: