ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ರೇಣುಕಾಸ್ವಾಮಿ ಕ್ರೂರ ಕೊಲೆ ಕೇಸ್‌ನಲ್ಲಿ ದರ್ಶನ್ ಸೇರಿ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. ನಟ ದರ್ಶನ್ ಜೈಲಿಗೆ ಹೋಗುತ್ತಿದ್ದಂತೆ ಸ್ಯಾಂಡಲ್‌ವುಡ್ ನಟ- ನಟಿಯರು, ಕುಟುಂಬಸ್ಥರು, ಆತ್ಮೀಯರು ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಡುತ್ತಿದ್ದಾರೆ. ಈ ಬಗ್ಗೆ ಹಲವಾರು ಮಂದಿ ಭಿನ್ನ ವಿಭಿನ್ನವಾದ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ.
ಈಗ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯ್ ರಾಘವೇಂದ್ರ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರೋದು ನೋವು ತರಿಸಿದೆ. ದರ್ಶನ್ ನಮ್ಮ ಕುಟುಂಬದವರು. ನಮ್ಮ ಸೀನಿಯರ್. ದಯವಿಟ್ಟು ಈ ವಿಚಾರದಿಂದ ಎಲ್ಲರೂ ಹೊರಗೆ ಬರಬೇಕು. ಇದನ್ನು ನಾನು ಬೆಳವಣಿಗೆ ಅಂತಾ ಕರಿಯೋಕೆ ಇಷ್ಟ ಪಡಲ್ಲ. ಎಲ್ಲಿ ನೋಡಿದ್ರೂ ಬರೀ ರೇಣುಕಾಸ್ವಾಮಿ ಪ್ರಕರಣದ ಸುದ್ದಿಯೇ ಓಡಾಡ್ತಿದೆ. ಡೆವಿಲ್ ಸಿನಿಮಾ ನಿಂತಿರುವ ಪರಿಣಾಮ ಮಿಲನಾ ಪ್ರಕಾಶ್ ಅವರಿಗೂ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.





