ಬೆಂಗಳೂರು : ಒಂದು ವೇಳೆ ದರ್ಶನ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಿ ಎಂದು ನಟ ಭಯಂಕರ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಮಲ್ಲಿಕಾರ್ಜುನಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನಿಗಿಂತ ಯಾರು ದೊಡ್ಡವರಲ್ಲ. ಒಂದು ವೇಳೆ ದರ್ಶನ್ ಅವರು ತಪ್ಪ ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
ಒಂದು ದುರಂತ ನಡೆದಿದೆ. ಕೊಲೆಯಾದ ಜೀವಕ್ಕೆ ನ್ಯಾಯ ಸಿಗಲೇ ಬೇಕು. ಮತ್ತೊಂದು ಕಡೆ ನಾವು ಪ್ರೀತಿ ಅಭಿಮಾನದಿಂದ ನೋಡಿದವರ ಹೆಸರು ಇದರಲ್ಲಿ ತಳಕು ಹಾಕಿಕೊಂಡಾಗ ಬೇಜಾರು ಆಗುತ್ತದೆ. ಆದರೇ ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದರು.
ಅಷ್ಟೇ ಅಲ್ಲದೇ ನಾವು ಯಾರು ಆ ಘಟನೆಯನ್ನು ಕಂಡಿಲ್ಲ. ಘಟನೆಯನ್ನು ಯಾರು ವಹಿಸಿಕೊಳ್ಳು ಸಾಧ್ಯವಿಲ್ಲ. ಅಲ್ಲಿ ನಡೆದ ಘಟನೆ ಬಗ್ಗೆ ನ್ಯಾಯಾಲಯ ಮತ್ತು ನ್ಯಾಯಾಧೀಶರಿಗೆ ಗೊತ್ತಿರುತ್ತದೆ. ಎಲ್ಲವನ್ನು ಪರಿಗಣಿಸಿ ಅವರು ನಿರ್ಧಾರ ಕೈಗೊಳ್ಳುತ್ತಾರೆ.
ಒಂದು ವೇಳೆ ತಪ್ಪು ಮಾಡಿಲ್ಲ ಎಂದಾದರೆ ಹೊರಗೆ ಬಂದು ನಮ್ಮನ್ನೆಲ್ಲ ಮತ್ತೆ ರಂಜಿಸಲಿ. ಜೀವನ ಸಧಾ ಮತ್ತೊಂದು ಅವಕಾಶ ನೀಡುತ್ತದೆ ಎಂದು ಹೇಳಿದರು.





