Mysore
29
overcast clouds

Social Media

ಬುಧವಾರ, 17 ಜೂನ್ 2026
Light
Dark

ಹಾವೇರಿ ಭೀಕರ ಅಪಘಾತ ; ಮೃತರ ಕುಟುಂಬಸ್ಥರಿಗೆ ಶಿವಣ್ಣ ದಂಪತಿ ಧನ ಸಹಾಯ

ಹಾವೇರಿ : ಇತ್ತೀಚೆಗೆ ಹಾವೇರಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ೧೩ ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಎಮ್ಮಿಹಟ್ಟಿ ಗ್ರಾಮಕ್ಕೆ ಇಂದು ನಟ ಶಿವರಾಜಕುಮಾರ್‌ ದಂಪತಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನದ ಜೊತೆಗೆ ಧನ ಸಹಾಯ ಮಾಡಿದ್ದಾರೆ.

ನಿಂತಿದ್ದ ಲಾರಿಗೆ ಹಿಂಬದಿಯಿಂದ ಹೋಗಿ ಟಿಟಿ ವಾಹನ ಡಿಕ್ಕಿಹೊಡೆದ ಪರಿಣಾಮ ಎಮ್ಮಿಹಟ್ಟಿ ಗ್ರಾಮದ ೧೩ ಮಂದಿ ಸಾವನ್ನಪ್ಪಿದ್ದರು. ಈಗಾಗಿ ಮೃತರ ಕುಟುಂಬಸ್ಥರು ನೋವಿನ ಜೊತೆಗೆ ಸಂಕಷ್ಟದಲ್ಲಿರುವುದರಿಂದ ಶಿವಣ್ಣ ದಂಪತಿ ಭೇಟಿ ನೀಡಿ , ʻನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಕಷ್ಟಕ್ಕೆ ನಾವು ಜೊತೆಯಾಗಿ ನಿಲ್ಲುತ್ತೇವೆʼ ಎಂದು ಸಾಂತ್ವನ ಹೇಳಿದರು. ಅಲ್ಲದೆ ಕುಟುಂಬಸ್ಥರಿಗೆ ಹಣ ಸಹಾಯ ಮಾಡುವ ಮೂಲಕ  ನೆರವಾದರು. ಇನ್ನು ಶಿವಣ್ಣ ದಂಪತಿಯ ಈ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

Tags:
error: Content is protected !!