Mysore
15
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮತ್ತೆ ಬಾಯ್ಲರ್ ಸ್ಪೋಟ

ವಿಜಯಪುರ : ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮತ್ತೆ ಬಾಯ್ಲರ್‌ ಸ್ಪೋಟಗೊಂಡಿದ್ದು, ಅದೃಷ್ಠವಶಾತ್‌ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ಕಾರ್ಖಾನೆಯಲ್ಲಿ ನುಸುಕಿನ ಜಾವ ಕಾರ್ಮಿಕರು ಟೀ ಕುಡಿಯಲು ತೆರಳಿದ್ದ ವೇಳೆ ಬಾಯ್ಲರ್‌ ಸ್ಪೋಟಗೊಂಡಿದೆ. ಕೂದಲೆಳೆ ಅಂತದರಲ್ಲಿ ೧೫ ಕಾರ್ಮಿಕರು ಪಾರಾಗಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

ಈ ಹಿಂದೆ ೨೦೨೩ ರ ಮಾರ್ಚ್‌ ೪ ರಂದು ಕೂಡ ಇದೇ ರೀತಿ ಬಾಯ್ಲರ್‌ ಬ್ಲಾಸ್ಟ್‌ ಆಗಿತ್ತು. ಈ ವೇಳೆ ಓರ್ವಕಾರ್ಮಿಕ ಸಾವನ್ನಪ್ಪಿದ್ದರು, ನಾಲ್ವರಿಗೆ ಗಾಯಗಳಾಗಿತ್ತು.

Tags:
error: Content is protected !!