Mysore
20
broken clouds

Social Media

ಶನಿವಾರ, 21 ಫೆಬ್ರವರಿ 2026
Light
Dark

೨ ವರ್ಷದಲ್ಲಿ ವರುಣ ಕ್ಷೇತ್ರದಲ್ಲಿ ಯಾವುದೇ ಶಿಥಿಲಾವಸ್ಥೆಯ ಶಾಲಾ ಕೊಠಡಿಗಳಿರಲ್ಲ: ಯತೀಂದ್ರ ಸಿದ್ದರಾಮಯ್ಯ

ಮೈಸೂರು : ಇನ್ನ ೨ ವರ್ಷದಲ್ಲಿ ವರುಣ ಕ್ಷೇತ್ರದಲ್ಲಿ ಯಾವುದೇ ಶಿಥಿಲ ವ್ಯವಸ್ಥೆಯ ಶಾಲಾ ಕೊಠಡಿಗಳು ಇರುವುದಿಲ್ಲ. ಅಷ್ಟರ ಮಟ್ಟಿಗೆ ಶೈಕ್ಷಣಿಕ ಪ್ರಗತಿ ಕೈಗೊಳ್ಳುತ್ತೇವೆ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹದಿನಾರು ಗ್ರಾಮದಲ್ಲಿ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ಐಟಿಸಿ ಕಂಪನಿ ವತಿಯಿಂದ ಎರಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಈ ಶಾಲಾ ಕೊಠಡಿಗಳನ್ನು ಹಾಗೂ ಅಂಗನವಾಡಿ ಕೊಣೆಗಳ ಬೀಗದ ಕೀ ಯನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಕೊಡುವ  ಮೂಲಕ ಡಾ.ಯತೀಂದ್ರ ಸಿದ್ದರಾಮಯ್ಯ ಕೊಠಡಿ ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ನಮ್ಮ ವರುಣ ಕ್ಷೇತ್ರದಲ್ಲಿರುವ ಕೈಗಾರಿಕಾ ಪ್ರದೇಶದ ಕಂಪನಿಗಳ ಮಾಲೀಕರು ಹಾಗೂ ದಾನಿಗಳು ಶೈಕ್ಷಣಿಕ ಪ್ರಗತಿಗೆ ಹೆಚ್ಚು ಸಹಕಾರ ನೀಡುತ್ತಿರುವುದು ಬಹಳ ಒಳ್ಳೆಯ ಕೆಲಸ ಎಂದು ಕಂಪನಿಗಳ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ಲದೆ ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಎಲ್ಲ ಗ್ರಾಮಗಳಲ್ಲೂ ಶಿಥಿಲ ವ್ಯವಸ್ಥೆಯಲ್ಲಿರುವ ಶಾಲಾ ಕೊಠಡಿಗಳನ್ನು ಕೆಡವಿ ಸರ್ಕಾರ ಮತ್ತು ದಾನಿಗಳ ಸಹಕಾರದಿಂದ ಇನ್ನು ಎರಡು ವರ್ಷಗಳಲ್ಲಿ ಹೊಸ ಶಾಲಾ ಕೊಠಡಿಗಳನ್ನ ನಿರ್ಮಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಇದೇ ವೇಳೆ ಐಟಿಸಿ ಕಂಪನಿ ವತಿಯಿಂದ ಡಾ.ಯತೀಂದ್ರ ಸಿದ್ರಾಮಯ್ಯನವರನ್ನು ಸನ್ಮಾನಿಸಲಾಯಿತು.

Tags:
error: Content is protected !!