ಕೇರಳ: ನೆರೆಯ ರಾಜ್ಯ ಕೇರಳದಲ್ಲಿ ಪ್ರಧಾನಿ ಮೋದಿ ಅಭಿಮಾನಿಯೋರ್ವರು ಮೋದಿಯವರ ಸುಂದರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ.
ಕೇರಳದ ಕಲಾವಿದ ರವಿಂದ್ರನ್ ಶಿಲ್ಪಸಾಲಾ ಎಂಬುವವರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಯನ್ನು ಕೆತ್ತಿದ್ದಾರೆ. ಈ ಭವ್ಯ ಪ್ರತಿಮೆಯನ್ನು ತೇಗದ ಮರದಲ್ಲಿ ಕೆತ್ತಲಾಗಿದ್ದು, 6.5 ಅಡಿಯಷ್ಟು ಎತ್ತರವಿದೆ.
ಕೇರಳದ ಕಲಾವಿದ ರವೀಂದ್ರನ್ ಶಿಲ್ಪಸಾಲಾ ಎಂಬುವವರು ಪ್ರಧಾನಿ ಮೋದಿಯ ಅಪ್ಪಟ ಅಭಿಮಾನಿ. ನಾನು ಕೂಡ ಪ್ರಧಾನಿ ಮೋದಿಯವರಿಗೆ ಏನಾದರೂ ಗಿಫ್ಟ್ ಕೊಡಬೇಕು ಎಂಬ ಆಸೆಯಲ್ಲಿದ್ದ ಅವರು, ಈಗ ಪ್ರಧಾನಿ ಮೋದಿಯವರ ಸುಂದರ ಪ್ರತಿಮೆಯನ್ನು ಕೆತ್ತಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರು ಮೂಲದ ಶಿಲ್ಪಿಯಾದ ರವೀಂದ್ರನ್ ಶಿಲ್ಪಸಾಲಾ ಅವರು, ಈ ಪ್ರತಿಮೆಯನ್ನು ಕೆತ್ತನೆ ಮಾಡಿ ಖುಷಿಪಟ್ಟಿದ್ದಾರೆ. ನರೇಂದ್ರ ಮೋದಿ ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿ ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿದ್ದಾರೆ. ಎನ್‌ಡಿಎ ಸರ್ಕಾರವು ಬಹುಮತ ಪಡೆದು ಸರ್ಕಾರ ರಚಿಸಿದೆ. ಇನ್ನೂ ಕೇರಳದಿಂದ ಸುರೇಶ್ ಗೋಪಿ ಎಂಬುವವರು ಮಾತ್ರ ಎನ್‌ಡಿಎ ಮಿತ್ರಕೂಟದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಇನ್ನೂ ತ್ರಿಶೂರ್‌ನಲ್ಲಿ ಬಿಜೆಪಿ ಕಚೇರಿ ಉದ್ಘಾಟನೆಯಾಗಲಿದ್ದು, ಪ್ರಧಾನಿ ಮೋದಿಯವರ ಪ್ರತಿಮೆಯನ್ನು ಈ ಕಚೇರಿಯ ಮುಂದೆ ಇಡಲಾಗುತ್ತದೆ. ಈ ಬಗ್ಗೆ ತ್ರಿಶೂರ್‌ನ ಬಿಜೆಪಿ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಈ ಮೂಲಕ ಕೇರಳದಲ್ಲಿ ಬಿಜೆಪಿ ಆರ್ಭಟ ಶುರುವಾಗಲಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಗೆ ಅಧಿಕ ಸ್ಥಾನಗಳಲ್ಲಿ ಗೆಲುವು ಸಿಗಲಿದೆ ಎಂದು ಹೇಳಲಾಗುತ್ತಿದೆ.





