Mysore
28
broken clouds

Social Media

ಶುಕ್ರವಾರ, 03 ಏಪ್ರಿಲ 2026
Light
Dark

ರಾಗಾ ಉತ್ತಮವಾಗಿ ಸ್ಟ್ಯಾಂಡಪ್‌ ಕಾಮಿಡಿ ಮಾಡಿದ್ದಾರೆ: ಕಂಗನಾ ಟೀಕೆ

ನದೆಹಲಿ: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಒಳ್ಳೆಯ ಸ್ಟಾಂಡಪ್‌ ಕಾಮಿಡಿ ಮಾಡಿದ್ದಾರೆ ಎಂದು ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರಣಾವತ್‌ ಲೇವಡಿ ಮಾಡಿದ್ದಾರೆ.

ಲೋಕಸಭಾ ಮೊದಲ ದಿನದ ಅದಿವೇಶನದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಹುಲ್‌ ಗಾಂಧಿ ಅವರು ಎಲ್ಲಾ ದೇವಾನುದೇವತೆಗಳನ್ನು ತಮ್ಮ ಬ್ರಾಂಡ್‌ ಅಂಬಾಸಿಡರ್‌ ಅನ್ನಾಗಿ ಮಾಡಿಕೊಂಡಿದ್ದಾರೆ. ಶಿವನು ಆಶಿರ್ವಾದ ಮಾಡಿ ಎತ್ತಿ ಕೈ ಕಾಂಗ್ರೆಸ್‌ದು ಎಂಬುದು ಅವರ ವಾದವಾಗಿತ್ತು ಎಂದು ಹೇಳಿದ್ದಾರೆ. ಇದು ನಮ್ಮೆಲ್ಲರಿಗೂ ನಗುವನ್ನು ಉಂಟುಮಾಡಿತ್ತು ಎಂದು ಲಘುವಾಗಿ ಟೀಕಿಸಿದ್ದಾರೆ.

ರಾಜಕುಮಾರ ಸಂಸತ್‌ಗೆ ಬಂದಾಗ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿಲ್ಲ ಎಂಬುದು ಅವರ ವಾದವಾಗಿತ್ತು. ಆದ್ದರಿಂದಲೇ ಅವರು ಈ ಸ್ಟ್ಯಾಂಡಪ್‌ ಕಾಮಿಡಿ ಮಾಡಿದರು ಎಂದು ದೂರಿದರು.

ರಾಹುಲ್‌ ಗಾಂಧಿ ಅವರು ಹಿಂದೂ ಧರ್ಮ, ಹಿಂದೂ ಸಮುದಾಯ ಹಾಗೂ ದೇವರುಗಳನ್ನು ಅವಮಾನಿಸಿದ್ದಾರೆ. ಇವರೆಲ್ಲರೂ ಹಿಂಸೆಗೆ ಪ್ರಚೋದನೆ ನೀಡುತ್ತಾರೆ ಎಂದು ಹಿಂಸಾತ್ಮಕ ಭಾವನೆಗಳನ್ನು ಮೂಡಿಸಲು ಪೇರೇಪಿಸಿದ್ದಾರೆ ಎಂದು ಆರೋಪಿಸಿದ ಕಂಗನಾ, ರಾಹುಲ್‌ ಗಾಂಧಿ ದೇಶದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

Tags:
error: Content is protected !!