Mysore
16
clear sky

Social Media

ಶನಿವಾರ, 07 ಫೆಬ್ರವರಿ 2026
Light
Dark

ಡಿಕೆಶಿ ಸಿಎಂ ಆಗಲೇಬೇಕು ಆಗೇ ಆಗುತ್ತಾರೆ : ಶಾಸಕ ಶಿವಗಂಗಾ ಬಸವರಾಜು ವಿಶ್ವಾಸ

ವಿಜಯನಗರ : ಡಿ ಕೆ ಶಿವಕುಮಾರ್‌ ಮುಖ್ಯಮಂತ್ರಿ ಆಗಲೇ ಬೇಕು, ಆಗಿಯೇ ಆಗುತ್ತಾರೆ ಎಂದು ಚೆನ್ನಗಿರಿ ಶಾಸಕ ಶಿವಗಂಗಾ ಬಸವರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಮಾತನಾಡಿದ ಅವರು, ತಳಮಟ್ಟದಿಂದ ಸಂಘಟನೆ ಮಾಡಿದ್ದು ಡಿಕೆ ಶಿವಕುಮಾರ್.‌ ಹೀಗಾಗಿ ಡಿಕೆ ಶಿವಕುಮಾರ್‌ ರಾಜ್ಯದ ಸಿಎಂ ಆಗಲೇ ಬೇಕು. ಡಿಕೆಶಿ  ಅವರನ್ನ ಸಿಎಂ ಮಾಡಿದ ಬಳಿಕ ಡಜನ್‌ ವ್ಯಕ್ತಿಗಳನ್ನ ಬೇಕಿದ್ರೆ ಡಿಸಿಎಂ ಮಾಡಲಿ.  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು ಮತ್ತು ಲೋಕಸಭಾ ಚುನಾವಣೆಯಲ್ಲಿ ಒಂದರಿಂದ ಒಂಭತ್ತು ಸ್ಥಾನ ಗೆಲ್ಲಲು ಡಿಕೆಶಿ ಕಾರಣರಾಗಿರುವುದರಿಂದ ಸಿಎಂ ಆಗುವುದು ಖಚಿತ ಎಂದು ಪುನರುಚ್ಚರಿಸಿದರು.

Tags:
error: Content is protected !!