Mysore
32
scattered clouds

Social Media

ಬುಧವಾರ, 20 ಮೇ 2026
Light
Dark

ಬಿಜೆಪಿ ಪಕ್ಷಕ್ಕೆ ವಾಪಸ್ ಆಗುವಂತೆ ಕರೆ ಬಂದಿದೆ, ನನ್ನ ಅಭಿಪ್ರಾಯ ತಿಳಿಸಿಲ್ಲ : ಈಶ್ವರಪ್ಪ

ಶಿವಮೊಗ್ಗ : ಬಿಜೆಪಿ ಪಕ್ಷಕ್ಕೆ ವಾಪಸ್‌ ಆಗುವಂತೆ ಕರೆ ಬಂದಿದೆ ಆದರೆ ನಾನು ಇನ್ನೂ ನನ್ನ ಅಭಿಪ್ರಾಯ ತಿಳಿಸಿಲ್ಲ ಎಂದು ಕೆ.ಎಸ್‌ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷಕ್ಕೆ ಬರುವಂತೆ ಬುಲಾವ್‌ ಬಂದಿದೆ. ಕೇವಲ ಚುನಾವಣೆಗಳು ಬಂದಾಗ ಮಾತ್ರ ಪಕ್ಷಕ್ಕೆ ಕರೆಯುವ ಕೆಲಸವಾಗುತ್ತದೆ ಆದರೆ ನಾನು ಕಾರ್ಯಕರ್ತರೊಂದಿಗೆ ಚರ್ಚಿಸಬೇಕಾಗಿದೆ. ನಾನು ಪಕ್ಷದಿಂದ ಹೊರಬಂದಿದ್ದರೂ ನನ್ನ ಅಸ್ತಿತ್ವಕ್ಕೆ ತೊಂದರೆಯಾಗಿಲ್ಲ ಎಂದು ಹೇಳುತ್ತಾ ಡಿಸಿಸಿ ಬ್ಯಾಂಕ್‌ ಚುನಾಚಣೆಯಲ್ಲಿ ತಮ್ಮ ಸ್ನೇಹಿತರೊಬ್ಬರು ದಿಗ್ಗಜರ ನಡುವೆ ನಡೆದ ಹೋರಾಟ ನಡೆಸಿ ಗೆಲುವು ಸಾಧಿಸಿದ್ದನ್ನ ಹೇಳಿದರು. ಅಲ್ಲದೆ ನಗರಸಭಾ ಚುನಾವಣೆಯ ಸಂದರ್ಭದಲ್ಲಿ  ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವ ಅಂಶವನ್ನು ಕಾರ್ಯಕರ್ತರೊಂದಿಗೆ ಚರ್ಚಿಸುತ್ತೇನೆ ಎಂದರು.

 

Tags:
error: Content is protected !!