ಹಾಸನ : ಹಾಸನದ ಎಸ್.ಪಿ ಕಚೇರಿ ಆವರಣದಲ್ಲಿಯೇ ಪತ್ನಿಗೆ ಪತಿ ಚಾಕು ಇರಿದಿರುವ ಘಟನೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ಹಾಸನದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆಗಿದ್ದ ಪತಿ ಲೋಕನಾಥ್ ಪತ್ನಿ ಮಮತಾಗೆ ಚಾಕುವಿನಿಂದ ಚುಚ್ಚಿದ್ದಾನೆ. ಇನ್ನು ಘಟನೆ ಯಿಂದ ಪತ್ನಿ ಮಮತ ಸಾವನ್ನಪ್ಪಿದ್ದು, ಆರೋಪಿ ಲೋಕನಾಥ್ ನನ್ನ ಪೊಲೀಸರು ಬಂಧಿಸಿದ್ದಾರೆ.