Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಹಾವೇರಿಯಲ್ಲಿ ಭೀಕರ ಅಪಘಾತದಲ್ಲಿ ಅಂಧರ ಫುಟ್ಬಾಲ್‌ ತಂಡದ ಆಟಗಾರ್ತಿ ಸಾವು!

ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಜ್ಯ ಅಂಧರ ಫುಟ್ಬಾಲ್‌ ತಂಡದ ಆಟಗಾರ್ತಿ ಎ.ಎಸ್‌ ಮಾನಸ ಅವರು ಮೃತರಾಗಿದ್ದಾರೆ.

ಎಮ್ಮೆಹಟ್ಟಿಯ ಶರಣಪ್ಪ ಹಾಗೂ ಭಾಗ್ಯ ದಂಪತಿಯ ಪುತ್ರಿ ಮಾನಸ ಆಗಿದ್ದಾರೆ. ಈ ಅಪಘಾತದಲ್ಲಿ ಮಾನಸ ಜೊತೆ ಅವರ ತಾಯಿ ಭಾಗ್ಯ ಕೂಡಾ ಸಾವಿಗೀಡಾಗಿದ್ದಾರೆ.

ಐಎಎಸ್‌ ಆಕಾಂಕ್ಷಿಯಾಗಿದ್ದ ಮಾನಸ ಬಿಎಸ್ಸಿ ಪದವಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಬೆಂಗಳೂರಿನಲ್ಲಿ ಇದ್ದುಕೊಂಡು ತರಬೇತಿ ಪಡೆಯುತ್ತಿದ್ದರು.

ರಾಜ್ಯ ಫುಟ್ಬಾಲ್‌ ತಂಡದ ನಾಯಕಿಯಾಗಿದ್ದ ಮಾನಸ ಅವರು, ಕೊಲ್ಕತ್ತಾದಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಫುಟ್ಬಾಲ್‌ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. 2022ರಲ್ಲಿ ಕೇರಳದ ಕೊಚ್ಚಿಯಲ್ಲಿ ಜಪಾನ್‌ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡದ ಪರವಾಗಿಯೂ ಮಾನಸ ಆಡಿದ್ದರು.

Tags: