ಕೊಡಗು : ಜಿಲ್ಲೆಯಾದ್ಯಂತ ವರುಣ ಆರ್ಭಟ ಜೋರಾಗಿದ್ದು, ಜನರು ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಒಂದೆಡೆ ಮಳೆಗೆ ರಸ್ತೆಯೆಲ್ಲ ಕುಸಿಯುವ ಹಂತಕ್ಕೆ ಬಂದಿದೆ. ಕೆಲವು ಕಡೆ ಮಳೆ ನೀರೇಲ್ಲವೂ ರಸ್ತೆಯಲ್ಲೇ ನಿಂತು ರಸ್ತೆಯೆಲ್ಲವೂ ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಮಡಿಕೇರಿಯ ಹೃದಯ ಭಾಗದಲ್ಲೇ ರಸ್ತೆ ಕುಸಿಯುತ್ತಿದೆ.
ಇನ್ನು ಮುಂದುವರೆದ ಮಳೆಯ ಆರ್ಭಟದಿಂದ ಕಾವೇರಿ ನದಿ ಪ್ರವಾಹ ಭೀತಿ ಹಿನ್ನೆಲೆ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ಬಳಿ ಇರುವ ದುಬಾರೆ ಪ್ರವಾಸಿ ತಾಣಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ.





