Mysore
29
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬಿಡದಿ ಬಳಿ ಕೆಎಸ್ಆರ್ಟಿಸಿ ಎಸಿ ಸ್ಲೀಪರ್ ಬಸ್ ಅಪಘಾತ..!

ಬೆಂಗಳೂರು : ಕೇರಳದ ಕ್ಯಾಲಿಕಟ್ ನಿಂದ ಬೆಂಗಳೂರಿಗೆ ಬರ್ತಿದ್ದ ಎಸಿ ಸ್ಲೀಪರ್ ಬಸ್ ಬಿಡದಿ ಬಳಿ ಅಪಘಾತವಾಗಿದ್ದು, ಘಟನೆಯಲ್ಲಿ 20 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದೆ. ಬೆಳಗಿನ ಜಾವ 5.30 ರ ಸುಮಾರಿಗೆ ಘಟನೆ ನಡೆದಿದ್ದು, ಡಿವೈಡರ್ ಗೆ ಡಿಕ್ಕಿ ಹೊಡೆದು ಮತ್ತೊಂದು ಬದಿಗೆ ಬಸ್ ಹೋಗಿದೆ. ಅದೃಷ್ಟವಶಾತ್ ಎದುರುಬದಿಯಲ್ಲಿ ಯಾವುದೇ ವಾಹನಗಳು ಬರದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.  ಇನ್ನು ಡ್ರೈವರ್ ನಿದ್ದೆ ಮಾಡಿರೊ ಹಿನ್ನೆಲೆ ಅಪಘಾತ ಶಂಕೆ  ವ್ಯಕ್ತವಾಗಿದ್ದು, ಗಾಯಗಳಾಗಿದ್ದ ಪ್ರಯಾಣಿಕರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Tags: