Mysore
26
scattered clouds

Social Media

ಸೋಮವಾರ, 12 ಜನವರಿ 2026
Light
Dark

ವರದಕ್ಷಿಣೆ ವಿಚಾರ: ಮಾವನ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಅಳಿಯ

ಚಾಮರಾಜನಗರ: ವರದಕ್ಷಿಣೆ ನೀಡಿಲ್ಲ ಎಂಬ ಕಾರಣಕ್ಕೆ ಮಾವನ ಮನೆಯ ಮುಂದೆ ನಿಂತಿದ್ದ ಎರಡು ಬೈಕ್‌ಗಳಿಗೆ ಅಳಿಯ ಬೆಂಕಿ ಹಚ್ಚಿದ ಘಟನೆ ಚಾಮರಾಜನಗರದ ಗಾಳಿಪುರದ ಅಬ್ದುಲ್‌ ಕಲಾಂ ನಗರದಲ್ಲಿ ಜರುಗಿದೆ.

ಹತೀಜಾ ಖೂಬ್ರಳ ಹಾಗೂ ಮೊಹಮ್ಮದ್‌ ಷರೀಪ್‌ ಕಳೆದು ಏಳು ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ಮದುವೆ ಬಳಿಕ ಹಣ ಹಾಗೂ ಚಿನ್ನಭರಣಕ್ಕೆ ಮಾವ ಹಾಗೂ ಹೆಂಡತಿಯನ್ನು ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

ಈ ಹಿನ್ನಲೆ ತಡರಾತ್ರಿ ಮಾನವ ಮನೆಯ ಮುಂದೆ ಬಂದ ಅಳಿಯ ಮನೆಯ ಮುಂದಿದ್ದ ಬೈಕಿಗೆ ಬೆಂಕಿ ಹಚ್ಚಿದ್ದಾನೆ. ಅಲ್ಲದೇ ತಡೆಯಲು ಹೋದ ಅತ್ತೆಯ ಕೈಯನ್ನೂ ಮುರಿದು ಹಾಕಿದ್ದಾನೆ. ಸದ್ಯ ಬೈಕ್‌ಗಳು ಧಗಧಗ ಉರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಹಿಂದೆಯೇ ಅಳಿಯನ ಗೋಳು ಸಹಿಸಲಾಗದೇ ಚಾಮರಾಜನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ವಿಚಾರಣೆ ನಡೆಸಿರಲಿಲ್ಲ. ಈಗಲಾದರೂ ಪೊಲೀಸರು ಅಳಿಯರ ರಂಪಾಟವನ್ನು ತಡೆದು ಅವನಿಗೆ ಬುದ್ದಿ ಕಲಿಸಲಿ ಎಂದು  ಕುಟುಂಬದವರು ಮನವಿ ಮಾಡಿದ್ದಾರೆ.

Tags:
error: Content is protected !!