Mysore
23
scattered clouds

Social Media

ಬುಧವಾರ, 15 ಜನವರಿ 2025
Light
Dark

ರೈತರಿಗೆ ಕೃಷಿ ಸಚಿವರಿಂದ ಭತ್ತದ ಕಟಾವು ಯಂತ್ರ ವಿತರಣೆ

ಮಂಡ್ಯ: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಇಂದು (ಜೂ.19) ಜಿಲ್ಲಾ ಪಂಚಾಯತ್ ಆವರಣದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಫಲಾನುಭವಿ ಗಿರೀಶ್ ಅವರಿಗೆ ಶಕ್ತಿಮಾನ್ (ಪ್ಯಾಡಿ ಮಾಸ್ಟರ್ 3776) ಭತ್ತದ ಕಟಾವು ಯಂತ್ರ ವಿತರಣೆ ಮಾಡಿದರು.

ಸದರಿ ಯಂತ್ರದ ಒಟ್ಟು ಮೊತ್ತ 31,50,000/- ರೂ ಗಳದಾಗಿದ್ದು, ಸರ್ಕಾರದ ಸಹಾಯಧನ ರೂ 12,12,500/- ಹಾಗೂ ರೈತನ ವಂತಿಗೆ ರೂ 19,37,500/- ಗಳಾಗಿರುತ್ತದೆ.

ಈ ಯಂತ್ರದಲ್ಲಿ ಪ್ರತಿ ಗಂಟೆಗೆ ಒಂದು ಎಕರೆ ಭತ್ತದ ಗದ್ದೆಯನ್ನು ಕಟಾವು ಮಾಡಬಹುದು. ಪ್ರತಿ ಗಂಟೆಗೆ 8 ರಿಂದ 9 ಲೀಟರ್ ಡೀಸಲ್ ಬಳಕೆಯಾಗುತ್ತದೆ. 7 ಕ್ವಿಂಟಲ್ ಭತ್ತದ ಶೇಖರಣಾ ಸಾಮರ್ಥ್ಯ ಹೊಂದಿರುತ್ತದೆ.

ಇದೇ ಸಂದರ್ಭದಲ್ಲಿ ವಿಧಾನಸಭಾ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಉದಯ್, ಜಿಲ್ಲಾಧಿಕಾರಿ ಡಾ: ಕುಮಾರ, ಕೃಷಿ ಇಲಾಖೆ ಪಾಂಡವಪುರ ಉಪವಿಭಾಗದ ಉಪನಿರ್ದೇಶಕಿ ಮಮತಾ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Tags: