Mysore
20
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಮಡಿಕೇರಿ: ನಿರ್ಮಾಣ ಹಂತದ ಬಾವಿಗೆ ಬಿದ್ದು ಕಾಡಾನೆ ಸಾವು!

ಮಡಿಕೇರಿ: ನಿರ್ಮಾಣ ಹಂತದ ಬಾವಿಯೊಳಗೆ ಕಾಡಾನೆಯೊಂದು ಬಿದ್ದು ಸಾವನ್ನಪ್ಪಿರುವ ಘಟನೆ ಮಡಿಕೇರಿ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರಿನ ಪಾಲಂಗಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತೆರೆದ ಬಾವಿಯನ್ನು ನಿರ್ಮಾಣ ಮಾಡುವ ಹಂತದಲ್ಲಿ ಇದ್ದ ಬಾವಿಗೆ ಸೋಮವಾರ (ಜೂನ್‌.17) ತಡರಾತ್ರಿ 11.30 ವೇಳೆಯಲ್ಲಿ ಕಾಡಾನೆಯೊಂದು ಬಿದ್ದು ಮೃತಪಟ್ಟಿದೆ.

ಪಾಲೇಂಗಡ ಬಿದ್ದಪ್ಪ ಶಂಭು ಎಂಬುವವರ ಮನೆ ಮುಂದೆ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

Tags:
error: Content is protected !!