ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಕಳೆದ ಏಳು ದಿನಗಳಿಂದಲೂ ಪೊಲೀಸರ ವಶದಲ್ಲಿದ್ದಾರೆ. ದರ್ಶನ್ ಹಾಗೂ ಗ್ಯಾಂಗ್ ಕೊಲೆ ಮಾಡಿದ್ದಾರೆ ಎನ್ನುವುದಕ್ಕೆ ಅನೇಕ ಸಾಕ್ಷಿಗಳ ಸಿಗುತ್ತಿವೆ ಎನ್ನಲಾಗಿದೆ. ಈ ಸಂಬಂಧ ದರ್ಶನ್‌ರನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕನ್ನಡದ ಜನಪ್ರಿಯ ನಟ ಚಾಲೆಂಜಿಗ್ ಸ್ಟಾರ್ ದರ್ಶನ್‌ರನ್ನೂ ನೋಡಲು ಈವರೆಗೂ ಪೊಲೀಸ್ ಠಾಣೆಗೆ ಯಾರು ಬಂದಿಲ್ಲ. ದರ್ಶನ್ ಅವರು ಕುಟುಂಬವನ್ನು ತಮ್ಮಿಂದ ದೂರವೇ ಇಟ್ಟಿದ್ದರು. ಪತ್ನಿ ವಿಜಯಲಕ್ಷ್ಮಿ ಅವರನ್ನು ಕೂಡ ದೂರ ಇಟ್ಟಿದ್ದರು ಎನ್ನಲಾಗಿದೆ. ತಾಯಿ ಮೀನಾ ತುಗೂದೀಪ ಕೂಡ ದರ್ಶನ್ ಜೊತೆ ಇಲ್ಲ. ಹೀಗಾಗಿ ಅವರ್ಯಾರು ದರ್ಶನ್ ಅವರನ್ನು ನೋಡಲು ಬಂದಿಲ್ಲ.
ಇನ್ನು ದರ್ಶನ್ ಆಪ್ತರು ಎನಿಸಿಕೊಂಡ ಕೆಲವರು ಹಾಗೂ ಅವರ ಜೊತೆ ಯಾವಾಗಲೂ ಇರುತ್ತಿದ್ದ ಕೆಲವು ಚಿತ್ರನಟರು ಕೂಡ ಈಗ ದರ್ಶನ್‌ನಿಂದ ದೂರವೇ ಇದ್ದಾರೆ. ಹೀಗಾಗಿ, ಅವರನ್ನು ನೋಡೋಕೆ ಯಾರೆಂದರೆ ಯಾರು ಬಂದಿಲ್ಲ.