Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಬೆಳಗಾವಿ: ನಕಲಿ ವೈದ್ಯನಿಂದ ಭ್ರೂಣ ಹತ್ಯೆ

ಬೆಳಗಾವಿ: ಇತ್ತೀಚೆಗೆ ರಾಜ್ಯದಲ್ಲಿ ಭ್ರೂಣ ಹತ್ಯೆಗಳು ಹೆಚ್ಚಾಗುತ್ತಿದ್ದು, ಮಂಡ್ಯದ ಭ್ರೂಣ ಹತ್ಯೆ ಪ್ರಕರಣ ಮಾಸುವ ಮುನ್ನವೆ ಬೆಳಗಾವಿ ಪಟ್ಟಣದ ತೋಟವೊಂದರಲ್ಲಿ ಭ್ರೂಣ ಹತ್ಯೆ ಪತ್ತೆಯಾಗಿದೆ.

ನಕಲಿ ವೈದ್ಯ ಅಬ್ದುಲ್‌ ಗಫಾರ್‌ ಲಾಡಖಾನ್ ಬೆಳಗಾವಿಯ ತಿಗಡೊಳ್ಳಿ ಗ್ರಾಮದಲ್ಲಿ ತೋಟವೊಂದನ್ನು ಲೀಸ್‌ಗೆ ಪಡೆದು ಭ್ರೂಣ ಹತ್ಯೆ ಮಾಡುತ್ತಿದ್ದ ಪ್ರಕರಣ ಬೆಳಕಿದೆ ಬಂದಿದೆ.

ನಕಲಿ ವೈದ್ಯನ ಈ ಕೃತ್ಯದ ಬಗ್ಗೆ ಬೆಳಗಾವಿಯ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌ ಅವರಿಗೆ ಮಾಹಿತಿ ಬಂದಿದ್ದು, ಜಿಲ್ಲಾಧಿಕಾರಿ ಅವರು ಪೊಲೀಸರು, ಆರೋಗ್ಯ ಇಲಾಖೆ ತಂಡ ಹಾಗೂ ಎಫ್‌ಎಸ್‌ಎಲ್‌ ತಂಡದವರಿಗೆ ಕಾರ್ಯಚರಣೆಗೆ ಸೂಚಿಸಿದ್ದರು. ಅದರಂತೆ ಭಾನುವಾರ ಕೈಗೊಂಡಿದ್ದ ಕಾರ್ಯಚರಣೆ ವೇಳೆ ಭ್ರೂಣ ಹತ್ಯೆ ಪತ್ತೆಯಾಗಿದ್ದು, ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಪಟ್ಟಣದ ತನ್ನ ಕ್ಲಿನಿಕ್‌ನಲ್ಲಿ ಈ ನಕಲಿ ವೈದ್ಯ ಗರ್ಭಪಾತ ಮಾಡುತ್ತಿದ್ದ ಹಾಗೂ ಭ್ರೂಣಗಳನ್ನು ತಾನು ಲೀಸ್‌ ಪಡೆದ ಫಾರ್ಮ್‌ಹೌಸ್‌ನಲ್ಲಿ ಹೂಳುತ್ತಿದ್ದ. ಈ  ಕುರಿತು ಮಾಹಿತಿ ಪಡೆದ ಪೊಲೀಸರು, ಆತನ ಸಹಾಯಕ ರೋಹಿತ್‌ ಕುಪ್ಪಸಗೌಡರ್‌ನನ್ನು ವಿಚಾರಣೆಗೆ ಒಳಪಡಿದ್ದರು. ಅವನು ನೀಡಿದ ಮಾಹಿತಿ ಆಧರಿಸಿ ಕಾರ್ಯಚರಣೆ ನಡೆಸಿದ್ದರು.  ಪಟ್ಟಣದ ಕ್ಲಿನಿಕ್‌ನಲ್ಲಿ ಈ ಮೂರು ಭ್ರೂಣಗಳ ಹತ್ಯೆಯಾಗಿದ್ದವು.

 

 

 

 

 

 

 

Tags: